ಮೀಟಿಂಗ್‌ಗಾಗಿ ಗೋವಾಗೆ ಪ್ರಯಾಣ; ಹಾವೇರಿ ಬಳಿ ಅಪಘಾತದಲ್ಲಿ ಮೂವರು ದುರ್ಮರಣ!

Published : Aug 15, 2019, 06:32 PM IST
ಮೀಟಿಂಗ್‌ಗಾಗಿ ಗೋವಾಗೆ ಪ್ರಯಾಣ; ಹಾವೇರಿ ಬಳಿ ಅಪಘಾತದಲ್ಲಿ ಮೂವರು ದುರ್ಮರಣ!

ಸಾರಾಂಶ

ಮಿಟಿಂಗ್ ಸಲುವಾಗಿ ಗೋವಾಗೆ ಪ್ರಯಾಣ ಬೆಳೆಸಿದ ಮೂವರು ಬಾರದ ಲೋಕಕ್ಕೆ ತೆರಳಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹಾವೇರಿ(ಆ.15): ದೇಶವೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದರೆ ಇತ್ತ ಹಾವೇರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಗೋವಾದಲ್ಲಿನ ಮೀಟಿಂಗ್‌ನಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಕಾರು ಡಿವೈಡರ್‌ಗೆ ಡಿಕ್ಕಿಯಾಗಿದೆ. ಅಪಘಾತವಾದ  ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಹಗರಿಬೊಮ್ಮನಹಳ್ಳಿಯ ಕೊಟ್ರೆಶ್ ಸಿದ್ರಾಮಪ್ಪ(45), ದಾವಣೆಗೆರೆಯ ಆನಂದ್ ಕುಮಾರ್(36), ಸತೀಶ್ ಕುಮಾರ್(38) ಮೃತ ದುರ್ದೈವಿಗಳು.

ಇದನ್ನೂ ಓದಿ: ಪ್ರವಾಹ ಪೀಡಿತರಿಗೆ ಆಹಾರ ಸಾಮಗ್ರಿ ನೀಡಲು ಹೋದವರೇ ಸ್ಮಶಾನ ಸೇರಿದ್ರು!

ತುರ್ತು ಮೀಟಿಂಗ್‌ನಲ್ಲಿ ಪಾಲ್ಗೊಳ್ಳಲು ಮೂವರು ಕಾರಿನಲ್ಲಿ ಹೊರಟಿದ್ದರು. ಆದರೆ  ಬ್ಯಾಡಗಿ ಸಮೀಪದ ಮೊಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಕಾರಿನ ಅತಿ ವೇಗದಿಂದ ಚಲಿಸುತ್ತಿದ್ದ  ಕಾರಣ ನಿಯಂತ್ರಣ ಕೂಡ ತಪ್ಪಿದೆ. ಹೀಗಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಇತ್ತ ಡಿವೈಡರ್‌ಗೆ ಡಿಕ್ಕಿ ಹೊಡೆದ  ಕಾರು ಸಂಪೂರ್ಣ ನಜ್ಜಗುಜ್ಜಾಗಿದೆ. 

ಇದನ್ನೂ ಓದಿ: ಹೀಗ್ ಮಾಡಿ, ರಸ್ತೆ ಅವಘಡ ತಡೀರಿ...

ಸಿದ್ರಾಮಪ್ಪ, ಆನಂದ್ ಕುಮಾರ್ ಹಾಗೂ ಸತೀಶ್ ಕುಮಾರ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಂತ ನಡೆದಿದ್ದು, ಮೃತ ಕುಟುಂಬಸ್ಥರ ಸ್ವಾತಂತ್ರ್ಯ ಸಂಭ್ರಮವನ್ನು ಕಸಿದುಕೊಂಡಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೆರಿಗೆ ಹೊರೆಯಿಂದ ಸಂಕ್ರಾಂತಿ ಹಿಗ್ಗು ಮಾಯ : ರವಿಕುಮಾರ್
ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ