
ನವದೆಹಲಿ: ಭಾರತದ ಮೇಲೆ ದಾಳಿ ನಡೆಸಿದ್ದ ಮಂಗೋಲಿಯನ್ನರ ಕ್ರೂರ ದೊರೆ ತೈಮೂರ್‌ನ ಹೆಸರನ್ನು ತಮ್ಮ ಪುತ್ರನಿಗೆ ಇಟ್ಟಿದ್ದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಹೆಸರು ಬದಲಾವಣೆಗೆ ಸೈಫ್ ಅಲಿ ಖಾನ್ ನಿರ್ಧರಿಸಿದ್ದರು ಎಂಬ ವಿಷಯವನ್ನು ಸೈಫ್‌ರ ಪತ್ನಿ ಕರೀನಾ ಕಪೂರ್ ಬಹಿರಂಗಪಡಿಸಿದ್ದಾರೆ.
ಇಂಡಿಯಾ ಟುಡೇ ಶೃಂಗದಲ್ಲಿ ಮಾತನಾಡಿದ ಕರೀನಾ, ವಿವಾದದ ಹಿನ್ನೆಲೆಯಲ್ಲಿ ಪುತ್ರನ ಹೆಸರು ತೈಮೂರ್ ಎಂಬುದರ ಬದಲಾಗಿ ಫೈಯಾಜ್ ಎಂದು ಬದಲಿಸಲು ಸೈಫ್ ಮುಂದಾಗಿದ್ದರು. ಆದರೆ ಅದಕ್ಕೆ ನಾನೇ ತಡೆ ಒಡ್ಡಿದ್ದೆ. ತೈಮೂರ್ ಎಂಬ ಹೆಸರಿನ ಅರ್ಥದಂತೆ ನನ್ನ ಮಗ ಉಕ್ಕಿನ ಮನುಷ್ಯನಂತೆ ಬೆಳೆಯಲಿದ್ದಾನೆ’ ಎಂದು ಕರೀನಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.