ಕಂಗನಾ, ನಿಮಗೆ ಇಂಡಸ್ಟ್ರಿ ಬಗ್ಗೆ ಭಯವಿದ್ದರೆ 'ಬಿಟ್ಟು ಬಿಡಿ'!

Published : Mar 06, 2017, 02:25 PM ISTUpdated : Apr 11, 2018, 12:43 PM IST
ಕಂಗನಾ, ನಿಮಗೆ ಇಂಡಸ್ಟ್ರಿ ಬಗ್ಗೆ ಭಯವಿದ್ದರೆ 'ಬಿಟ್ಟು ಬಿಡಿ'!

ಸಾರಾಂಶ

ಜನಪ್ರಿಯ ಶೋ ಕಾಫಿ ವಿತ್ ಕರಣ್ ನಲ್ಲಿ ಕಂಗನಾ ರಾಣಾವತ್ ಕರಣ್ ಜೋಹರ್ ಗೆ ಸ್ವಜನ ಪಕ್ಷಪಾತಿ ಅಂದಾಗ ಅವರು ಏನೂ ಪ್ರತಿಕ್ರಿಯಿಸದೇ ಇದ್ದಿದ್ದು ಬಾಲಿವುಡ್ ಮಾತ್ರವಲ್ಲ ಇಡೀ ದೇಶವೇ ಅಚ್ಚರಿ ಪಡುವಂತೆ ಮಾಡಿತ್ತು. ಸಾಮಾನ್ಯವಾಗಿ ಕರಣ್ ಮುಕ್ತವಾಗಿ ಮಾತನಾಡುವವರು. ಆದರೆ ಲೈವ್ ಶೋನಲ್ಲಿ ಇಂತದ್ದೊಂದು ಗಂಭೀರ ಆರೋಪ ಮಾಡಿದಾಗ ಮೌನ ವಹಿಸಿದ್ದು ಆಶ್ಚರ್ಯಕ್ಕೆ ಕಾರಣವಾಗಿತ್ತು.

ನವದೆಹಲಿ (ಮಾ.06): ಜನಪ್ರಿಯ ಶೋ ಕಾಫಿ ವಿತ್ ಕರಣ್ ನಲ್ಲಿ ಕಂಗನಾ ರಾಣಾವತ್ ಕರಣ್ ಜೋಹರ್ ಗೆ ಸ್ವಜನ ಪಕ್ಷಪಾತಿ ಅಂದಾಗ ಅವರು ಏನೂ ಪ್ರತಿಕ್ರಿಯಿಸದೇ ಇದ್ದಿದ್ದು ಬಾಲಿವುಡ್ ಮಾತ್ರವಲ್ಲ ಇಡೀ ದೇಶವೇ ಅಚ್ಚರಿ ಪಡುವಂತೆ ಮಾಡಿತ್ತು. ಸಾಮಾನ್ಯವಾಗಿ ಕರಣ್ ಮುಕ್ತವಾಗಿ ಮಾತನಾಡುವವರು. ಆದರೆ ಲೈವ್ ಶೋನಲ್ಲಿ ಇಂತದ್ದೊಂದು ಗಂಭೀರ ಆರೋಪ ಮಾಡಿದಾಗ ಮೌನ ವಹಿಸಿದ್ದು ಆಶ್ಚರ್ಯಕ್ಕೆ ಕಾರಣವಾಗಿತ್ತು.

ಕಡೆಗೂ ಈ ಮೌನ ಮುರಿದ ಕರಣ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅನುಪಮ್ ಛೋಪ್ರಾಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ ಕಂಗಾನಾ ನನ್ನ ಶೋನ ಅತಿಥಿಯಾಗಿದ್ದರು. ಅವರು ಹೇಳುವುದನ್ನು ನಾನು ಕೇಳಬೇಕಾಗುತ್ತದೆ. ಅವರ ಅಭಿಪ್ರಾಯವನ್ನು ಹೇಳುವು ಹಕ್ಕು ಅವರಿಗಿದೆ. ಆದರೆ ಸ್ವಜನಪಕ್ಷಪಾತಿ ಎಂದು ನನಗೇಕೆ ಹೇಳಿದರು ಎಂದು ನನಗೆ ಅರ್ಥವಾಗಲಿಲ್ಲ. ನಾನು ನನ್ನ ಮಗ, ಮಗಳು, ಸಂಬಂಧಿಕರೊಂದಿಗೆ ಕೆಲಸ ಮಾಡುತ್ತಿದ್ದೇನೆಯೇ? ಅವರು ಹೇಳಿದಂತೆ 15 ನಿರ್ದೇಶಕರು ಫಿಲ್ಮ್ ಇಂಡಸ್ಟ್ರಿಯಿಂದ ಬಂದವರಲ್ಲವೇ? ಅವರು ಯಾಕೆ ಹಾಗೆ ಹೇಳಿದರು ನನಗರ್ಥವಾಗಿಲ್ಲ ಎಂದಿದ್ದಾರೆ.

ಕರಣ್ ಜೋಹರ್ ಸಂದರ್ಶನದಲ್ಲಿ ಹೇಳಿದ ಮಾತುಗಳಿವು.    

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ