ಸಿಂಗ್ ಭೇಟಿ ಮಾಡಿದ ಕಪಿಲ್ ಶರ್ಮ : ನಡೆದ ಮಾತುಕತೆ ಏನು..?

By Web DeskFirst Published Feb 6, 2019, 2:54 PM IST
Highlights

ಕಾಮಿಡಿಯನ್ ಕಪಿಲ್ ಶರ್ಮ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ನವದೆಹಲಿ : ಕಾಮಿಡಿಯನ್ ಕಪಿಲ್ ಶರ್ಮ ಮಾಜಿ ಪ್ರಧಾನಿ  ಮನಮೋಹನ್ ಸಿಂಗ್ ಅವರನ್ನು ಫೆ.5ರಂದು ಅವರ ದಿಲ್ಲಿ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. 

ಭೇಟಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫೊಟೊ ಶೇರ್ ಮಾಡಿ ಹೃದಯಪೂರ್ವಕವಾಗಿ ನಮ್ಮ ಮಾತುಕತೆ ನಡೆಯಿತು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಭೇಟಿಗೆ ಹೃದಯವಂತ ವ್ಯಕ್ತಿಗೆ ಧನ್ಯವಾದ ತಿಳಿಸಿದ್ದಾರೆ. 

ಅತ್ಯಂತ ಸರಳ ವ್ಯಕ್ತಿಯಾದ ಮೆಚ್ಚಿನ ಡಾ. ಮನಮೋಹನ್ ಸಿಂಗ್ ಅವರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ ಎಂದು ಕಪಿಲ್ ಶರ್ಮಾ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. 

ಕೆಲ ವಾರಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರನ್ನೂ ಕೂಡ  ಕಪಿಲ್ ಶರ್ಮ ಭೇಟಿ ಮಾಡಿದ್ದರು. ಮುಂಬೈನಲ್ಲಿ ನಡೆದ ನ್ಯಾಷನಲ್ ಮ್ಯೂಸಿಯಂ ಉದ್ಘಾಟನಾ ಸಮಾರಂಭದಲ್ಲಿ ಮೋದಿ ಹಾಗೂ ಶರ್ಮ ಭೇಟಿ ನಡೆದಿತ್ತು. 

ಇದೀಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ - ಕಪಿಲ್ ಭೇಟಿ ಬಗ್ಗೆ ಮೋದಿ ಟ್ವೀಟ್ ಮಾಡಿ ಕಾಲೆಳೆದಿದ್ದು, ಕಪಿಲ್ ಶರ್ಮ ಓರ್ವ ವ್ಯಕ್ತಿಯನ್ನು ಭೇಟಿ ಮಾಡಿ ಅವರನ್ನು ಹೊಗಳಿದರೆ ಅದು ಆ ವ್ಯಕ್ತಿಗೆ ಸಂತೋಷ ತರಿಸಬಹುದು. ಆದರೆ ನನಗೆ ಈ ಬಗ್ಗೆ ಯಾವುದೇ ನಿರೀಕ್ಷೆ  ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.

 

When appreciates somebody's humour, it sure makes that person happy and I am no exception. :)

Thank you for the kind words Kapil. https://t.co/SHVTH6vI8p

— Narendra Modi (@narendramodi)
click me!