ಕಾನ್ಪುರ ರೈಲು ದುರಂತ: ಸಾವಿನ ಸಂಖ್ಯೆ 145ಕ್ಕೆ ಏರಿಕೆ

By Suvarna Web DeskFirst Published Nov 21, 2016, 10:20 AM IST
Highlights

ಪತ್ತೆಯಾದ ಮೃತದೇಹಗಳ ಪೈಕಿ 123 ಮಂದಿಯ ಗುರುತು ಪತ್ತೆಯಾಗಿದೆ, ಹಾಗೂ 110 ಮಂದಿಯ ಮೃತರ ದೇಹವನ್ನು ಈಗಾಗಲೇ ಕುಟುಂಬದವರಿಗೆ ವಶಕ್ಕೆ ನೀಡಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾ-ನಿರೀಕ್ಷಿಕ ಜಾವೇದ್ ಆಹಮದ್ ತಿಳಿಸಿದ್ದಾರೆ.

ಕಾನ್ಪುರ(ನ.21): ಇಂದೋರ್-ಪಾಟ್ನಾ ಎಕ್ಸ್'ಪ್ರೆಸ್ ರಯಲು ದುರ್ಘಟನೆಯಲ್ಲಿ ಮಡಿದವರ ಸಂಖ್ಯೆ 145ಕ್ಕೆ ಏರಿದೆ. ಇದರೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡದ ಕಾರ್ಯಾಚರಣೆಯೂ ಕೂಡಾ ಮುಕ್ತಾಯಗೊಂಡಿದೆ.

250 ಸದಸ್ಯರ ವಿಪತ್ತು ನಿರ್ವಹಣೆ ತಂಡವು ಮೃತದೇಹ ಹಾಗೂ ಗಾಯಗೊಂಡವರ ರಕ್ಷಣೆಗಾಗಿ ಸತತ 30 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದೆ.

ಪತ್ತೆಯಾದ ಮೃತದೇಹಗಳ ಪೈಕಿ 123 ಮಂದಿಯ ಗುರುತು ಪತ್ತೆಯಾಗಿದೆ, ಹಾಗೂ 110 ಮಂದಿಯ ಮೃತರ ದೇಹವನ್ನು ಈಗಾಗಲೇ ಕುಟುಂಬದವರಿಗೆ ವಶಕ್ಕೆ ನೀಡಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾ-ನಿರೀಕ್ಷಿಕ ಜಾವೇದ್ ಆಹಮದ್ ತಿಳಿಸಿದ್ದಾರೆ.

ಭಾನುವಾರ ನಸುಕಿನ ಜಾವದಲ್ಲಿ ಇಂದೋರ್-ಪಾಟ್ನಾ ಎಕ್ಸ್'ಪ್ರೆಸ್ ಕಾನ್ಪುರ ಬಳಿ ಹಳಿ ತಪ್ಪಿತ್ತು. ಘಟನೆಗೆ ಸಂಬಂಧಿಸಿದಂತೆ ಕೇಂದ್ರ ರೈಲು ಸಚಿವ ಸುರೇಶ್ ಪ್ರಭು ತನಿಖೆಗೆ ಆದೇಶಿಸಿದ್ದಾರೆ.

click me!