
ತಿರುವನಂತಪುರಂ[ಜೂ.25]: ಖ್ಯಾತ ಪತ್ರಕರ್ತ ಹಾಗೂ ‘ಕನ್ನಡಪ್ರಭ’ ಪತ್ರಿಕೆಯ ಅಂಕಣಕಾರ ಪದ್ಮಶ್ರೀ ಪುರಸ್ಕೃತ ಟಿಜೆಎಸ್ ಜಾಜ್‌ರ್, ಕೇರಳ ಸರ್ಕಾರದಿಂದ ಪತ್ರಕರ್ತರಿಗೆ ನೀಡುವ ಅತ್ಯುನ್ನತ ಗೌರವ ‘ಸ್ವದೇಶಾಭಿಮಾನಿ- ಕೇಸರಿ ಮೀಡಿಯಾ’ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಸ್ವದೇಶಾಭಿಮಾನಿ ಪತ್ರಿಕೆ ಆರಂಭಿಸಿ ಬ್ರಿಟೀಷ್ ಸರ್ಕಾರದ ವಿರುದ್ಧ ಲೇಖನಗಳನ್ನು ಬರೆಯುತ್ತಿದ್ದ ರಾಮಕೃಷ್ಣ ಪಿಳ್ಳೈ ಮತ್ತು ಕೇಸರಿ ಪತ್ರಿಕೆಯ ಸ್ಥಾಪಕರಾದ ಕೇಸರಿ ಬಾಲಕೃಷ್ಣ ಪಿಳ್ಳೈ ಅವರಿಂದ ಜಂಟಿಯಾಗಿ ಸ್ವದೇಶಾಭಿಮಾನಿ- ಕೇಸರಿ ಪ್ರಶಸ್ತಿ ಸ್ಥಾಪಿಸಲ್ಪಟ್ಟಿದೆ. ಈ ಪ್ರಶಸ್ತಿ ಒಂದು ಲಕ್ಷ ರು. ನಗದು ಬಹುಮಾನವನ್ನು ಹೊಂದಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜು.1ರಂದು ತಿರುವನಂತಪುರಂನಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಟಿಜೆಎಸ್ ಜಾಜ್‌ರ್ ಅವರು 1950ರಲ್ಲಿ ಫ್ರೀ ಪ್ರೆಸ್ ಜರ್ನಲ್ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಇಂಟರ್ ನ್ಯಾಷನಲ್ ಪ್ರೆಸ್ ಇನ್ಸಿ$್ಟಟ್ಯೂಟ್ ಸೇರಿದಂತೆ ಹಲವಾರು ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಅವರು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂಪಾದಕೀಯ ಸಲಹೆಗಾರರಾಗಿದ್ದಾರೆ. ಈ ಪತ್ರಿಕೆಯಲ್ಲಿ ಪ್ರತಿ ಭಾನುವಾರ ‘ಪಾಯಿಂಟ್ ಆಫ್ ವ್ಯೂ’ ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಮೊಹಮ್ಮದ್ ಕೋಯಾ ಪತ್ರಿಕೋದ್ಯಮ ಪ್ರಶಸ್ತಿ, ಬಶೀರ್ ಪುರಸ್ಕಾರ, ಕಮಲಾ ಸೂರ್ಯ ಪ್ರಶಸ್ತಿ, ಕೇಸರಿ ಮೀಡಿಯಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.