ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದವಾಗಿದೆ ’ವಿದ್ಯಾಕಾಶಿ’

Published : Dec 19, 2018, 01:08 PM IST
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದವಾಗಿದೆ ’ವಿದ್ಯಾಕಾಶಿ’

ಸಾರಾಂಶ

ಡಾ.ಚಂದ್ರಶೇಖರ ಕಂಬಾರ ಅಧ್ಯಕ್ಷತೆಯಲ್ಲಿ ಜ.೦4 ರಿಂದ ಮೂರು ದಿನಗಳ ಕಾಲ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಸಿದ್ಧಗೊಂಡಿದೆ.    

ಧಾರವಾಡ  (ಡಿ.19): ಡಾ.ಚಂದ್ರಶೇಖರ ಕಂಬಾರ ಅಧ್ಯಕ್ಷತೆಯಲ್ಲಿ ಜ.೦4 ರಿಂದ ಮೂರು ದಿನಗಳ ಕಾಲ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಸಿದ್ಧಗೊಂಡಿದೆ.

ಜ.04 ರಂದು ಬೆಳಗ್ಗೆ 11 ಕ್ಕೆ ನಡೆಯುವ ಸಮಾರಂಭದಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. 

ಧಾರ​ವಾ​ಡದ ಗರಿಮೆಗಳಾದ ಕರ್ನಾ​ಟಕ ವಿದ್ಯಾ​ವ​ರ್ಧಕ ಸಂಘ, ಕರ್ನಾ​ಟಕ ವಿಶ್ವ​ವಿ​ದ್ಯಾ​ಲಯ, ಡಯಟ್‌ ಹಾಗೂ ಸಾಹಿತ್ಯ ಮತ್ತು ಸಂಗೀ​ತದ ಹಿನ್ನೆ​ಲೆಯ ಕಲ್ಪ​ನೆ​ಯಲ್ಲಿ ಕಲಾವಿದ ಮಹೇಶ ಪತ್ತಾರ ರಚಿ​ಸಿದ  ಲಾಂಛನವನ್ನು ಕಂದಾಯ ಸಚಿವ ಆರ್‌.ವಿ. ದೇಶ​ಪಾಂಡೆ ಬಿಡು​ಗಡೆ ಮಾಡಿ​ದರು.

ಕನ್ನಡ ಸಾಹಿತ್ಯ ಪರಿ​ಷತ್‌ ಲಾಂಛನ ಸೇರಿ ಕನ್ನ​ಡದ ಬಾವುಟ, ಹುಬ್ಬ​ಳ್ಳಿಯ ಕಿತ್ತೂರು ಚೆನ್ನಮ್ಮನ ಪ್ರತಿಮೆ, ಪುಸ್ತ​ಕ​ಗಳ ಹೊತ್ತಿಗೆ, ಸಂಗೀ​ತದ ಪರಿ​ಕ​ರ​ಗ​ಳನ್ನು ಒಳ​ಗೊಂಡ ಲಾಂಛನ ಇದಾಗಿದೆ. ಲಾಂಛನ ಬಿಡುಗಡೆ ಜತೆಗೆ, ಸಮ್ಮೇ​ಳ​ನದ ಮಾಹಿತಿ ಇಡೀ ಜಗ​ತ್ತಿಗೆ ಪಸ​ರಿ​ಸಲು ಸಿದ್ಧ​ವಾದ ವೆಬ್‌​ಸೈಟ್‌(  (abkssdwd.org) ಅನ್ನು ಸಹ ಜಿ.ಪಂ. ಸಭಾಂಗ​ಣ​ದಲ್ಲಿ ನಡೆದ ಸಮ್ಮೇ​ಳ​ನದ ಪೂರ್ವ​ಭಾವಿ ಸಭೆ​ಯಲ್ಲಿ ಸಚಿ​ವರು ಲೋಕಾ​ರ್ಪ​ಣೆ​ಗೊ​ಳಿ​ಸಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!