ಜೋಗಿ ವಿರಚಿತ ‘ಎಲ್‌’ ಪುಸ್ತಕ ಬಿಡುಗಡೆ

Published : Jun 09, 2019, 10:41 AM IST
ಜೋಗಿ ವಿರಚಿತ ‘ಎಲ್‌’ ಪುಸ್ತಕ ಬಿಡುಗಡೆ

ಸಾರಾಂಶ

ಸಾವಣ್ಣ ಪ್ರಕಾಶನವು ನೂರು ಕೃತಿಗಳನ್ನು ಪ್ರಕಟಿಸಿದ ಸಂಭ್ರಮದಲ್ಲಿದ್ದು, ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್‌ರಾವ್‌ ಅವರ ಎಲ್‌ ಪುಸ್ತಕ ಬಿಡುಗಡೆ ಮೂಲಕ ತನ್ನ ಶತಕದ ಸಂಭ್ರಮ ಆಚರಿಸುತ್ತಿದೆ. 

ಬೆಂಗಳೂರು :  ಖ್ಯಾತ ಪ್ರಕಾಶನ ಸಂಸ್ಥೆಯಾದ ಸಾವಣ್ಣ ಪ್ರಕಾಶನವು ನೂರು ಕೃತಿಗಳನ್ನು ಪ್ರಕಟಿಸಿದ ಸಂಭ್ರಮದಲ್ಲಿದ್ದು, ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್‌ರಾವ್‌ ಅವರ ಎಲ್‌ ಪುಸ್ತಕ ಬಿಡುಗಡೆ ಮೂಲಕ ತನ್ನ ಶತಕದ ಸಂಭ್ರಮವನ್ನು ಭಾನುವಾರ ಆಚರಿಸಿಕೊಳ್ಳುತ್ತಿದೆ.

ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವಲ್ಡ್‌ರ್‍ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ಸಾವಣ್ಣ ಪ್ರಕಾಶನದ ‘ಶತಕದ ಸಂಭ್ರಮ’ ಮತ್ತು ‘ಎಲ್‌’ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದ್ದು, ನಾಡೋಜ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ‘ಎಲ್‌’ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಸಮಾರಂಭದ ಮುಖ್ಯಅತಿಥಿಗಳಾಗಿ ‘ಕನ್ನಡಪ್ರಭ’ ಪ್ರಧಾನ ಸಂಪಾದಕರಾದ ರವಿ ಹೆಗಡೆ, ‘ವಿಶ್ವವಾಣಿ’ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌, ಲೇಖಕ ಸುರೇಶ್‌ ಪದ್ಮನಾಭನ್‌, ‘ವಿಜಯಕರ್ನಾಟಕ’ದ ಲವಲವಿಕೆ- ಬೋಧಿವೃಕ್ಷ ಸಂಪಾದಕ ಶ್ರೀವತ್ಸ ನಾಡಿಗ್‌, ‘ಎಲ್‌’ ಕೃತಿಯ ಲೇಖಕ ಹಾಗೂ ‘ಕನ್ನಡಪ್ರಭ’ ಪುರವಣೆ ಸಂಪಾದಕ ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ) ಉಪಸ್ಥಿತರಿರುವರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?