
ನವದೆಹಲಿ (ನ.21): ಬಾಲಿವುಡ್‍ನಲ್ಲಿ ವಿವಾದ ಎಬ್ಬಿಸಿರುವ 'ಪದ್ಮಾವತಿ' ಸಿನಿಮಾಗೆ ನಟ ಕಮಲ್ ಹಾಸನ್ ಬೆಂಬಲ ಸೂಚಿಸಿದ್ದಾರೆ. ಪದ್ಮಾವತಿ ಪಾತ್ರ ಪೋಷಿಸಿರುವ ನಟಿ ದೀಪಿಕಾ ಪಡುಕೋಣೆ ತಲೆಗೆ 5 ಕೋಟಿ ರೂ, 10 ಕೋಟಿ ರೂ ಬಹುಮಾನ ನೀಡುವುದಾಗಿ ಕೆಲವು ಸಂಘಟನೆಗಳು ಘೋಷಿಸಿವೆ.
ಈ ಬಗ್ಗೆ ಕಮಲ್ ಹಾಸನ್ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ದೀಪಿಕಾ ತಲೆ ಕಡಿದು ತರಬೇಕು ಎಂದು ಘೋಷಿಸಿರುವವರ ವಿರುದ್ಧ ಅವರು ತಿರುಗಿಬಿದ್ದಿದ್ದಾರೆ. ಇಂತಹ ಹೇಳಿಕೆ ಕೊಡುವವರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ.
'ದೀಪಿಕಾ ತಲೆಯನ್ನು ನಾನು ರಕ್ಷಿಸಬೇಕು ಎಂದುಕೊಂಡಿದ್ದೇನೆ. ನಾವು ಮಹಿಳೆಯರನ್ನು ಅವರ ದೇಹಕ್ಕಿಂತ ಹೆಚ್ಚಾಗಿ ಗೌರವಿಸುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶ ಅವರಿಗೆ ಕೊಟ್ಟಿರುವ ಸ್ವಾತಂತ್ರ್ಯವನ್ನು ಗೌರವಿಸಬೇಕು. ಇದನ್ನು ಯಾರೂ ಬೇಡ ಎನ್ನಲ್ಲ. ಬಹಳಷ್ಟು ಮಂದಿ ನನ್ನ ಸಿನಿಮಾಗಳನ್ನು ವಿರೋಧಿಸಿದರು. ಯಾವುದೇ ಕ್ಷೇತ್ರದಲ್ಲಾಗಬಹುದು ಉಗ್ರವಾದ ಧೋರಣೆ ಒಳ್ಳೆಯದಲ್ಲ. ಎಚ್ಚೆತ್ತುಕೋ ಬೌದ್ಧಿಕ ಭಾರತ.. ಕೇಳಿಸಿಕೊಳ್ಳುತ್ತಿದ್ದೀಯಾ ಭಾರತ ಮಾತೆ.' ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.
ಒಟ್ಟಾರೆ ಈ ಹೇಳಿಕೆ ಮೂಲಕ ಪದ್ಮಾವತಿ ಸಿನಿಮಾ ಬೆನ್ನಿಗೆ ನಿಂತಿದ್ದಾರೆ. ಪದ್ಮಾವತಿ ಚಿತ್ರದ ವಿರುದ್ಧ ಈಗಾಗಲೆ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ ನಿಷೇಧ ಹೇರಲಾಗಿದೆ. ಅದರೆ ಸುಪ್ರೀಂಕೋರ್ಟ್ ಮಾತ್ರ ಈ ವಿಷಯದಲ್ಲಿ ಪದ್ಮಾವತಿ ಪರವಾಗಿ ನಿಂತಿದೆ. ಸಿನಿಮಾ ಸೆನ್ಸಾರ್ ಮಂಡಳಿ ಮುಂದೆ ಹೋಗುವುದಕ್ಕೂ ಮುನ್ನವೇ ಟೀಕಿಸುವುದು ಸರಿಯಲ್ಲ ಎಂದು ತೀರ್ಪು ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.