
ಚೆನ್ನೈ(ಫೆ.21): ಬಹುಭಾಷಾ ನಟ ಕಮಲ್ ಹಾಸನ್ ಇತ್ತೀಚೆಗೆ ತಮಿಳುನಾಡು ರಾಜಕೀಯದ ಬಗ್ಗೆ ಕಮೆಂಟ್ ಮಾಡಿ ವಿವಾದಕ್ಕೆ ಸಿಲುಕುತ್ತಿದ್ದಾರೆ. ತಾವು ರಾಜಕೀಯಕ್ಕೆ ಬಂದರೆ ಗನ್'ಗಳೊಂದಿಗೆ ಬರುತ್ತೇವೆ ಎಂದಿದ್ದ ಕಮಲ್ ಹಾಸನ್ ನೂತನ ಸಿಎಂ ಪಳನಿಸ್ವಾಮಿ ಆಯ್ಕೆ, ವಿಶ್ವಾಸಮತ ಸಾಬೀತು ಪ್ರಕ್ರಿಯೆ ಕುರಿತು ಕೂಡಾ ಆವೇಶವಾಗಿ ಮಾತನಾಡಿದ್ದರು. ಅಂತೆಯೇ ಕಮಲ್ ವಿದ್ಯಾರ್ಥಿಗಳು, ಯುವಕರನ್ನು ರೊಚ್ಚಿಗೇಳಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ.ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಂಡಿಯನ್ ನ್ಯಾಷನಲ್ ಲೀಗ್ ಪಾರ್ಟಿಯ ಚೆನ್ನೈ ನಗರ ಘಟಕ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.
ಕಮಲ್ ಹಾಸನ್ ಟ್ವಿಟ್ಟರ್'ನಲ್ಲಿ 'People of Tamizhnadu, Welcome your respective MLAs with the respect they desrve back home' ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ತಮಿಳುನಾಡಿನ ಶಾಸಕರಿಗೆ ವಿರುದ್ಧವಾಗಿಯೂ, ಅವರ ವಿರುದ್ಧ ಜನರನ್ನು ಎತ್ತಿಕಟ್ಟಿ ದೊಂಬಿಗೆ ಪ್ರೇರೇಪಿಸುವಂತೆಯೂ ಇದೆ. ಹೀಗಾಗಿ ಕಮಲ್ ಅವರನ್ನು ಅರೆಸ್ಟ್ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಇತ್ತ, ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೂಡ ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದಾರೆ. ಕಮಲ್ ಒಬ್ಬ ಮೂಳೆಗಳಿಲ್ಲದ ಅದ್ಭುತ ಮತ್ತು ಸ್ವಪ್ರತಿಷ್ಠೆಯ ಮೂರ್ಖ ಎಂದು ಟ್ವೀಟರ್‌ನಲ್ಲಿ ಜರಿದಿದ್ದಾರೆ. ವ್ಯಕ್ತಿಯೊಬ್ಬರು ಕಮಲ್ ಹಾಸನ್ ಬಿಜೆಪಿಗೆ ಬಂದರೆ ನೀವು ಸ್ವೀಕರಿಸುತ್ತೀರಾ ಎಂಬ ಟ್ವೀಟ್‌ಗೆ ಸುಬ್ರಮಣಿಯನ್ ಸ್ವಾಮಿ ಈ ರಿಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.