
ಚೆನ್ನೈ(ಸೆ.26): ಹೊಸ ವರ್ಷದ ಆರಂಭದಲ್ಲಿ ತಮ್ಮ ನೇತೃತ್ವದ ಪಕ್ಷ ಆರಂಭವಾಗಲಿದೆ ಎಂದು ಬಹುಭಾಷಾ ನಟ ಕಮಲ್ ಹಾಸನ್ ಹೇಳಿದ್ದಾರೆ. ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಬಗ್ಗೆ ಮಾತನಾಡಿದ ಅವರು ಧಾರ್ಮಿಕ ಹಿನ್ನೆಲೆ ಹೊಂದಿರುವ ರಜನಿಗೆ ಬಿಜೆಪಿಯೇ ಸೂಕ್ತ ಎಂದಿದ್ದಾರೆ.
ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಮಲ್ ಹಾಸನ್ ತಾವು ವಿಚಾರವಾದಿ ಅಲ್ಲದೇ ಜಾತಿ ಮತ್ತು ಭ್ರಷ್ಟಾಚಾರದ ವಿರೋಧಿ ಎಂದಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆ ನಡೆಸಿದ ಭ್ರಷ್ಟಾಚಾರಗಳನ್ನು ತಮಿಳುನಾಡಿನ ಜನರು ನೋಡಿದ್ದಾರೆ. ನನ್ನ ನೇತೃತ್ವದ ಹೊಸ ಪಕ್ಷದ 2018ರ ಆರಂಭದಲ್ಲಿಯೇ ಶುರುವಾಗಲಿದೆ.
ತನ್ನನ್ನು ತಾನು ಜಾತಿ ಪದ್ಧತಿ ಮತ್ತು ಭ್ರಷ್ಟಾಚಾರದ ವಿರೋಧಿ ಎಂದು ಹೇಳಿಕೊಂಡ ಕಮಲ್ ಹಾಸನ್, ಸೂಪರ್‌ಸ್ಟಾರ್ ರಜನಿಕಾಂತ್ ಧಾರ್ಮಿಕ ಸ್ವಭಾವ ಇರುವ ವ್ಯಕ್ತಿ. ಹೀಗಾಗಿ ಅವರು ಬಿಜೆಪಿಗೆ ಸೂಕ್ತವಾದವರು ಎಂದರು. ಅಲ್ಲದೇ ಅವರ ಮತ್ತು ನನ್ನ ದಾರಿ ಒಂದೇ ಆಗಿರಲು ಸಾಧ್ಯವಿಲ್ಲ. ಅವರ ದಾರಿಯೇ ಬೇರೆ, ನನ್ನ ದಾರಿಯೇ ಬೇರೆ. ಕಮಲ್ ಮತ್ತು ರಜನಿ ಎಂದು ಹೋಲಿಕೆ ಮಾಡುವುದೇ ಕೆಟ್ಟದ್ದು ಅಂತ ಹೇಳಿದ್ರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.