
ಬೆಂಗಳೂರು(ಸೆ.26): ರಾಜ್ಯದ ಪವರ್ ಮಿನಿಸ್ಟರ್, ಡಿಕೆ ಶಿವಕುಮಾರ್ ನಿವಾಸದ ಮನೆ ಮೇಲಿನ ಐಟಿ ದಾಳಿ ವೇಳೆ ಮಾಜಿ ಸಿಎಂ ಎಸ್ಎಂ ಕಷ್ಣ ಅಳಿಯ ಸಿದ್ಧಾರ್ಥ್ ಐಟಿ ವಂಚನೆ ಬಗ್ಗೆ ಮಾಹಿತಿ ಸಿಕ್ಕಿತ್ತು.. ಹೀಗಾಗಿ ನಾಲ್ಕು ದಿನಗಳ ಕಾಲ ದಾಳಿ ನಡೆಸಿದ ಐಟಿಗೆ ಸಿಕ್ಕಿದ್ದು ಬೆಚ್ಚಿ ಬೀಳಿಸುವ ಮಾಹಿತಿ. ಕರ್ನಾಟಕ ಸೇರಿ 29 ರಾಜ್ಯಗಳಲ್ಲಿ 1,530 ಕಾಫಿ ಡೇಗಳನ್ನು ಸಿದ್ಧಾರ್ಥ್ ನಡೆಸುತ್ತಿದ್ದಾರೆ. ಅಲ್ಲದೆ, ಚಿಕ್ಕಮಗಳೂರು, ಮಡಿಕೇರಿ, ಹಾಸನ ಜಿಲ್ಲೆಯಲ್ಲಿನ ಸಾವಿರಾರು ಎಕರೆ ಕಾಫಿ ಎಸ್ಟೇಟ್ಗಳ ಇವರ ಮಾಲೀಕತ್ವದಲ್ಲಿವೆ. ಆಶ್ಚರ್ಯ ಅಂದ್ರೆ ನೋಟ್ ಬ್ಯಾನ್ ಬಳಿಕೆ ಸಿದ್ಧಾರ್ಥ್ ವ್ಯವಹಾರದ ದುಪ್ಪಟ್ಟಾಗಿರೋ ಮಾಹಿತಿ ಸಿಕ್ಕಿದ್ದು, ಜಿಎಸ್ಟಿ ಜಾರಿ ಬಳಿಕ ಕೇಂದ್ರಕ್ಕೆ ಈ ಚಿತ್ರಣ ಲಭ್ಯವಾಗಿದೆ.
ದಾಳಿ ವೇಳೆ 650 ಕೋಟಿ ರೂಪಾಯಿ ಅಘೋಷಿತ ಆಸ್ತಿ ಪತ್ತೆ..!
1996ರಲ್ಲಿ ಬ್ರಿಗೇಡ್ ರಸ್ತೆಯಲ್ಲಿ ಕಾಫಿ ಡೇ ತೆರೆಯೋ ಮೂಲ್ಕ ಬ್ಯುಸಿನೆಸ್ಗೆ ಎಂಟ್ರಿಯಾದ ಸಿದ್ಧಾರ್ಥ್ ಇದೀಗ ಸಾವಿರಾರು ಕೋಟಿ ಆಸ್ತಿ ಒಡೆಯ. ಸಿದ್ಧಾರ್ಥ್ ಹೆಸರಲ್ಲಿ ಸಿಕ್ಕ ಆಸ್ತಿ ಪ್ರಮಾಣ ಕಂಡು ಐಟಿ ಅಧಕಾರಿಗಳೇ ದಂಗಾಗಿದ್ದಾರೆ.. ಬರೋಬ್ಬರಿ 650 ಕೋಟಿ ರೂಪಾಯಿ ಅಘೋಷಿತ ಆಸ್ತಿ ಪತ್ತೆಯಾಗಿದೆ.
ಅಘೋಷಿತ ಆಸ್ತಿ ಸಂಬಂಧ ದಾಖಲೆ ಪತ್ರ, ಕಂಪ್ಯೂಟರ್ ಹಾರ್ಡ್ಡಿಸ್ಕ್, ಪೆನ್ಡ್ರೈವ್ ಸೇರಿ ಹಲವು ದಾಖಲೆ ವಶಕ್ಕೆ ಪಡೆಯಲಾಗಿದೆ. ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಕಾನೂನು ಉಲ್ಲಂಘಿಸಿರೋದು ಕಂಡುಬಂದಿದೆ ಎಂದು ಐಟಿ ಅಧಿಕಾರಿ ತಿಳಿಸಿದ್ದಾರೆ. ಸದ್ಯ ಐಟಿ ಅಧಿಕಾರಿಗಳು ಸಿದ್ಧಾರ್ಥ್ಗೆ ನೋಟಿಸ್ ನೀಡಿ, ಸ್ಪಷ್ಟ ಉತ್ತರ ನೀಡಲು ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.