
ಮಂಗಳೂರು (ಮಾ. 21): ದೇಶಕ್ಕಾಗಿ ಸಾಯುವುದಲ್ಲ. ದೇಶಕ್ಕಾಗಿ ಬದುಕಬೇಕು ಎಂದು ಸಂಘ ನಮಗೆ ಹೇಳಿಕೊಟ್ಟಿದೆ. 1947 ರಲ್ಲಿ ಸ್ವಾತಂತ್ರ್ಯ ಬಂದರೂ ಆಗ ದೇಶವನ್ನು ಒಡೆದರು. ಅದಕ್ಕೆ ಅಂದು ನಮಗೆ ವಿಜಯದಿವಸ ಅಲ್ಲ.
ಆದರೆ ತುರ್ತು ಪರಿಸ್ಥಿತಿ ವಾಪಸ್ ಪಡೆದ ದಿನ ದೇಶ ಒಂದುಗೂಡಿತು. ಹಾಗಾಗಿ ನಾವು ಮಾರ್ಚ್ 21 ನ್ನು ವಿಜಯ ದಿವಸ ಎಂದು ಆಚರಿಸುತ್ತೇವೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಕಳೆದ 93 ವರ್ಷಗಳಿಂದ ಜನಸಂಘ ಕೆಲಸ ಮಾಡುತ್ತಿದೆ. ಅಂದು ದೇಶ ವಿಭಜನೆ ತಡೆಯುವಷ್ಟು ಶಕ್ತಿ ಸಂಘಕ್ಕೆ ಇರಲಿಲ್ಲ. ಸಂಘದ ಮೇಲೆ ನಿಷೇಧ ಹೇರುವ ಪ್ರಯತ್ನ ಕಾಂಗ್ರೆಸ್ ಮಾಡಿತು. ಕಾರಣ ಕಾಂಗ್ರೆಸ್'ಗಿಂತ ಹೆಚ್ಚು ಗಟ್ಟಿಯಾಗಿ ಸಂಘ ಬೆಳೆಯುತ್ತಿತ್ತು. ಅದೇ ಸಮಯದಲ್ಲಿ ಮಹಾತ್ಮ ಗಾಂಧಿ ಹತ್ಯೆ ಆಯಿತು. ಅದನ್ನ ಸಂಘದ ಮೇಲೆ ಹಾಕಲಾಯಿತು. ಇಡಿ ದೇಶ ಸಂಘದ ವಿರುದ್ಧ ತಿರುಗಿತು. ಸಂಘ ಏಕಾಂಗಿ ಆಯಿತು. 77 ಸಾವಿರ ಸ್ವಯಂ ಸೇವಕರ ಬಂಧನ ಆಯಿತು ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.