ಕೈಗಾ ಅಣು ವಿದ್ಯುತ್ ಘಟಕದಲ್ಲಿ ವಿಶ್ವದಾಖಲೆ

Published : Oct 25, 2018, 10:43 AM IST
ಕೈಗಾ ಅಣು ವಿದ್ಯುತ್ ಘಟಕದಲ್ಲಿ ವಿಶ್ವದಾಖಲೆ

ಸಾರಾಂಶ

ಕೈಗಾ ಅಣು ವಿದ್ಯುತ್ ಸ್ಥಾವರ ಇದೀಗ ವಿಶ್ವ ದಾಖಲೆಯೊಂದನ್ನು ಸೃಷ್ಟಿ ಮಾಡಿದೆ. ಸತತವಾಗಿ 895 ದಿನಗಳ ಕಾಲ ವಿದ್ಯುತ್  ಉತ್ಪಾದನೆ ಮಾಡುವ ಮೂಲಕ ಈ ದಾಖಲೆಗೆ ಪಾತ್ರವಾಗಿದೆ. 

ಬೆಂಗಳೂರು :  ಕೈಗಾ ಅಣು ವಿದ್ಯುತ್ ಸ್ಥಾವರದ 1 ನೇ ಘಟಕ ನಿರಂತರ 895 ದಿನಗಳ ಕಾಲ ವಿದ್ಯುತ್  ಉತ್ಪಾದನೆ ಮಾಡುವ ಮೂಲಕ ಭಾರಜಲ  ಆಧಾರಿತ ಅಣು ವಿದ್ಯುತ್ ಘಟಕಗಳಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನಕ್ಕೆ ಗುರುವಾರ ಲಗ್ಗೆ ಇಡುತ್ತಿದೆ. ಎಲ್ಲ ರೀತಿಯ ಅಣು ವಿದ್ಯುತ್ ಘಟಕಗಳನ್ನು ಪರಿಗಣಿಸಿದಾಗ ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ಏರಲಿದೆ. 

ಬುಧವಾರದವರೆಗೆ ನಿರಂತರ 894 ದಿನಗಳ ಕಾಲ ವಿದ್ಯುತ್ ಉತ್ಪಾದನೆ ಮಾಡಿರುವ ಕೈಗಾ ಅಣುಸ್ಥಾವರದ ಮೊದಲ ಘಟಕ, ಕೆನಡಾದ  ಪಿಕೆರಿಂಗ್ ಘಟಕದ ಸಾಧನೆ ಸರಿಗಟ್ಟಿದೆ. ಗುರುವಾರ ಬೆಳಗ್ಗೆ 9.15ಕ್ಕೆ ವಿಶ್ವದಾಖಲೆಗೆ ಪಾತ್ರವಾಗಲಿದೆ. ಕೈಗಾ 1ನೇ ಘಟಕ 2016 ರ ಮೇ 13 ರಿಂದ 2018 ರ ಅ. 24 ರವರೆಗೆ ತನಕ ಅಂದರೆ ಒಟ್ಟೂ 894  ದಿನಗಳ ಕಾಲ ಸತತವಾಗಿ ವಿದ್ಯುತ್ ಪ್ರಥಮ ಸ್ಥಾನದಲ್ಲಿತ್ತು. 

ಬ್ರಿಟನ್‌ನ ಅಣು ವಿದ್ಯುತ್ ಘಟಕ ಸತತ  940 ದಿನಗಳ ಕಾಲ ವಿದ್ಯುತ್ ಉತ್ಪಾದಿಸುವ ಮೂಲಕ ಜಾಗತಿಕ ದಾಖಲೆ ಮಾಡಿದೆ. ಆದರೆ ಇದು ಭಾರಜಲ ಆಧಾರಿತ ಅಣು ವಿದ್ಯುತ್ ಘಟಕ ಅಲ್ಲ. ಗ್ಯಾಸ್ ಆಧಾರಿತ ಅಣು ವಿದ್ಯುತ್ ಘಟಕ. ಕೈಗಾ ಘಟಕ ಆ ದಾಖಲೆಯನ್ನು
ಮೀರಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ
ಸಿದ್ದರಾಮಯ್ಯ ಬಳಿಕ ಸತೀಶ್‌ ಜಾರಕಿಹೊಳಿ ಸಿಎಂ ಆದರೆ ಖುಷಿ: ಬಿ.ಕೆ.ಹರಿಪ್ರಸಾದ್‌