ಪರಿಕ್ಕರ್ ಮೇಲೆ ಬಿಜೆಪಿ ಒತ್ತಡ: ಆರ್‌ಎಸ್‌ಎಸ್‌ ಮಾಜಿ ಮುಖ್ಯಸ್ಥ ಆರೋಪ!

Published : Oct 25, 2018, 10:40 AM ISTUpdated : Oct 25, 2018, 10:42 AM IST
ಪರಿಕ್ಕರ್ ಮೇಲೆ ಬಿಜೆಪಿ ಒತ್ತಡ: ಆರ್‌ಎಸ್‌ಎಸ್‌ ಮಾಜಿ ಮುಖ್ಯಸ್ಥ  ಆರೋಪ!

ಸಾರಾಂಶ

ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ ಆರ್‌ಎಸ್‌ಎಸ್‌ ನಾಯಕ! ಕಚೇರಿಗೆ ಹಾಜರಾಗುವಂತೆ ಗೋವಾ ಸಿಎಂ ಪರಿಕ್ಕರ್ ಮೇಲೆ ಒತ್ತಡ! ಆರ್‌ಎಸ್‌ಎಸ್‌ ಗೋವಾ ಘಟಕದ ಮಾಜಿ ಮುಖ್ಯಸ್ಥ ಸುಭಾಷ್ ವಾಲಿಂಗ್ಕರ್ ಆರೋಪ! ಪರಿಕ್ಕರ್ ಚೇತರಿಸಿಕೊಳ್ಳಲು ಮತ್ತಷ್ಟು ವಿಶ್ರಾಂತಿಯ ಅಗತ್ಯವಿದೆ ಎಂದ ಸುಭಾಷ್! ಗೋವಾ ಹಿಡಿತ ಕೈತಪ್ಪುವ ಭಯದಿಂದ ಪರಿಕ್ಕರ್ ಮೇಲೆ ಬಿಜೆಪಿ ಒತ್ತಡ  

ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಕಚೇರಿಗೆ ಹಾಜರಾಗಿ ಅಧಿಕಾರ ನಡೆಸುವಂತೆ ಬಿಜೆಪಿ ಅನಗತ್ಯ ಒತ್ತಡ ಹೇರುತ್ತಿದೆ ಎಂದು ಗೋವಾ ಆರ್‌ಎಸ್ಎಸ್ ಘಟಕದ ಮಾಜಿ ಅಧ್ಯಕ್ಷ ಸುಭಾಷ್ ವಾಲಿಂಗ್ಕರ್ ಗಂಭೀರ ಆರೋಪ ಮಾಡಿದ್ದಾರೆ.

ಪರಿಕ್ಕರ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಮತ್ತಷ್ಟು ವಿಶ್ರಾಂತಿ ಅಗತ್ಯವಿದ್ದರೂ, ಅವರ ಮೇಲೆ ಬಿಜೆಪಿ ಹೈಕಮಾಂಡ್ ಅನಗತ್ಯವಾಗಿ ಒತ್ತಡ ಹೇರುತ್ತಿದೆ. ಯಾವುದೇ ಸಂದರ್ಭದಲ್ಲಿಯೂ ಗೋವಾದಲ್ಲಿ ಹಿಡಿತ ಬಿಗಿಗೊಳಿಸಲು ಬಯಸಿರುವ ಬಿಜೆಪಿ, ಕಚೇರಿಕೆ ಹಾಜರಾಗುವಂತೆ ಒತ್ತಡ ಹೇರುತ್ತಿದೆ. ಇದರಿಂದ ಅವರ ಆರೋಗ್ಯ ಮತ್ತಷ್ಟು ಹದಗೆಡುವ ಸಾಧ್ಯತೆಗಳಿವೆ ಎಂದು ಸುಭಾಷ್ ಹೇಳಿದ್ದಾರೆ.

ಪರಿಕ್ಕರ್ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಕೇಂದ್ರ ಸರ್ಕಾರ ಗೋವಾ ರಾಜ್ಯಕ್ಕೆ ಪರ್ಯಾಯ ಮುಖ್ಯಮಂತ್ರಿ ನೇಮಿಸುವುದು ಸೂಕ್ತ. ಇಲ್ಲದೇ ಹೋದರೆ, ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ. ಶೀಘ್ರದಲ್ಲಿಯೇ ಪತನಗೊಳ್ಳಲಿದೆ ಎಂದು ವಾಲಿಂಗ್ಕರ್ ಎಚ್ಚರಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ