ಯೋಧನ ಒಂದೇ ಹೊಡೆತಕ್ಕೆ ನಡುಗಿ ಹೋಗಿದ್ದ ಅಜರ್: 25 ವರ್ಷದ ಹಿಂದೆ ನಡೆದಿದ್ದೇನು?

Published : Feb 19, 2019, 09:27 AM IST
ಯೋಧನ ಒಂದೇ ಹೊಡೆತಕ್ಕೆ ನಡುಗಿ ಹೋಗಿದ್ದ ಅಜರ್: 25 ವರ್ಷದ ಹಿಂದೆ ನಡೆದಿದ್ದೇನು?

ಸಾರಾಂಶ

ಕಪಾಳಕ್ಕೆ ಬಾರಿಸುತ್ತಿದ್ದಂತೆ ನಡುಗಿ ಹೋಗಿದ್ದ ಅಜರ್‌!| ಹೆದರಿಕೆಯಿಂದ ಉಗ್ರರ ಪ್ಲ್ಯಾನ್‌ ಬಿಚ್ಚಿಟ್ಟಿದ್ದ ಜೈಷ್‌ ಮುಖ್ಯಸ್ಥ| 25 ವರ್ಷಗಳ ಹಿಂದಿನ ವಿಚಾರಣೆ ಅನುಭವ ಬಿಚ್ಚಿಟ್ಟಅಧಿಕಾರಿ

ನವದೆಹಲಿ[ಫೆ.19]: ದೇಶದಲ್ಲಿ ಸರಣಿಯಾಗಿ ಭಯೋತ್ಪಾದಕ ದಾಳಿ ಸಂಘಟಿಸುವ ಮೂಲಕ ಭೀತಿ ಹುಟ್ಟಿಸುವ ಭ್ರಮೆಯಲ್ಲಿರುವ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ ಹೆದರುಪುಕ್ಕಲ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಪೋರ್ಚುಗೀಸ್‌ ಪಾಸ್‌ಪೋರ್ಟ್‌ ಮೇಲೆ ಕಾಶ್ಮೀರಕ್ಕೆ ಆಗಮಿಸಿ 1994ರಲ್ಲಿ ಸಿಕ್ಕಿಬಿದ್ದಿದ್ದ ಆತನನ್ನು ವಿಚಾರಣೆಗೊಳಪಡಿಸಿದ ಅಧಿಕಾರಿ ಹೇಳುವ ಪ್ರಕಾರ, ‘ಮೌಲಾನಾ ಮಸೂದ್‌ ಅಜರ್‌ ವಿಚಾರಣೆಗೆ ನಾವು ಹೆಚ್ಚು ಕಷ್ಟಪಡಲಿಲ್ಲ. ಯೋಧರೊಬ್ಬರು ಕಪಾಳಕ್ಕೆ ಒಂದು ಏಟು ಬಾರಿಸುತ್ತಿದ್ದಂತೆ ಹೆದರಿ, ಉಗ್ರರ ಚಟುವಟಿಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಹೇಳಿದ್ದ’ ಎಂದು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಾರಿದ್ದ ಪರೋಕ್ಷ ಯುದ್ಧದ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಪರದಾಡುತ್ತಿದ್ದಾಗ, ಮಸೂದ್‌ ಅಜರ್‌ ಉಗ್ರರ ನೇಮಕಾತಿ, ಭಯೋತ್ಪಾದಕ ಸಂಘಟನೆಗಳ ಕಾಯನಿರ್ವಹಣೆ ಕುರಿತು ಅಮೂಲ್ಯ ಮಾಹಿತಿ ನೀಡಿದ್ದ. ಇದಕ್ಕಾಗಿ ಆತನಿಗೆ ಬಲಪ್ರಯೋಗ ಏನನ್ನೂ ಮಾಡಲಿಲ್ಲ. ಒಂದೇ ಏಟಿಗೆ ಆತ ಮಾಹಿತಿ ಕೊಟ್ಟಿದ್ದ ಎಂದು ಗುಪ್ತಚರ ದಳದಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಸಿಕ್ಕಿಂನ ನಿವೃತ್ತ ಡಿಜಿಪಿ ಅವಿನಾಶ್‌ ಮೊಹನಾನಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು