23 ಹುತಾತ್ಮ CRPF ಯೋಧರ ಸಾಲ ಮನ್ನಾ ಮಾಡಿದ SBI: ವಿಮೆಯೂ ಪಾಸ್

By Web DeskFirst Published Feb 19, 2019, 8:21 AM IST
Highlights

ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ23 ಯೋಧರ ಸಾಲವನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ ಮನ್ನಾ ಮಾಡಿದೆ

ಮುಂಬೈ[ಫೆ.19]: ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ23 ಯೋಧರ ಸಾಲವನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ ಮನ್ನಾ ಮಾಡಿದೆ.

ದಾಳಿಯಲ್ಲಿ ಮೃತಪಟ್ಟಸಿಆರ್‌ಪಿಎಫ್‌ನ 23 ಮಂದಿ ಯೋಧರು ಎಸ್‌ಬಿಐನಿಂದ ಸಾಲ ಪಡೆದುಕೊಂಡಿದ್ದರು. ಅವರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.

ಎಲ್ಲಾ ಸಿಆರ್‌ಪಿಎಫ್‌ ಯೋಧರು ಎಸ್‌ಬಿಐನಲ್ಲಿ ವೇತನ ಖಾತೆಯನ್ನು ಹೊಂದಿದ್ದು, ಪ್ರತಿ ಯೋಧರಿಗೆ 30 ಲಕ್ಷ ರು. ವರೆಗೂ ವಿಮೆಗೆ ಒಳಪಟ್ಟಿದ್ದಾರೆ. ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ವಿಮಾ ಹಣವನ್ನು ಪಾವತಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.

click me!
Last Updated Feb 19, 2019, 8:21 AM IST
click me!