
ಟಾಲಿವುಡ್'ನ ಸೂಪರ್ ಸ್ಟಾರ್ ಜೂನಿಯರ್ ಎನ್.ಟಿ.ಆರ್'ಗೆ ಕನ್ನಡ ಅಂದ್ರೆ ಅದೆಷ್ಟು ಪ್ರೀತಿ ಅಲ್ವಾ?... ಯಾಕಂದ್ರೆ ಯಾವುದೆ ಕಾರ್ಯಕ್ರಮಕ್ಕೂ ಹೋದ್ರು. ಜೂನಿಯರ್ ಎನ್.ಟಿ.ಆರ್ ಮೊದಲು ಹೇಳೊದು ಅವರು ಕನ್ನಡದ ಮಗ ಅಂತ
ಜೂನಿಯರ್ ಎನ್.ಟಿ.ಆರ್ ತಾಯಿ ಶಾಲಿನಿ ಭಾಸ್ಕರ್ ರಾವ್ ಕರ್ನಾಟಕದ ಕುಂದಾಪುರ ಮೂಲದವರು ಹೀಗಾಗಿ ಟಾಲಿವುಡ್ ಟಾಪ್ ಸ್ಟಾರ್ ಅದ್ರೂ ಜೂ. ಎನ್.ಟಿ.ಆರ್ ಕನ್ನಡ ಚಿತ್ರರಂಗದ ನಂಟು ಅಷ್ಟೆ ಸುಂದರವಾಗಿದೆ. ಇನ್ನೂ ಇತ್ತಿಚಿಗೆ ಕನ್ನಡದ ಗೆಳೆಯ ಸ್ಯಾಂಡಲ್'ವುಡ್ ಪವರ್'ಸ್ಟಾರ್ ಪುನೀತ್'ರಾಜ್ ಕುಮಾರ್ ಚಕ್ರವ್ಯೂಹ ಚಿತ್ರಕ್ಕೆ ಗೆಳೆಯೆ ಗೆಳೆಯ ಅಂತ ಸಖತ್ತಾಗೆ ಹಾಡಿದರು. ಜೊತೆಗೆ ಗೆಳೆಯ ಅಪ್ಪು'ಗೂ ಎನ್.ಟಿ.ಆರ್ ವಿಶ್ ಮಾಡಿದ್ದರು.
ಅಂದ್ಹಾಗೆ ಟಾಲಿವುಡ್'ನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿದೆ. ತೆಲುಗು ಬಿಗ್ ಬಾಸ್ ರಿಯಾಲಿಟಿ ಶೋ ನಟ ಜೂನಿಯರ್ ಎನ್.ಟಿ.ಆರ್ ನಿರೂಪಣೆ ಮಾಡ್ತಿದ್ದಾರೆ. ಇತ್ತಿಚಿಗೆ ಒಂದು ಎಪಿಸೋಡ್ ನಲ್ಲಿ ಕನ್ನಡ ಮೂಲದ ಸ್ಪರ್ಧಿಯೊಂದಿಗೆ ಜೂನಿಯರ್ ಎನ್.ಟಿ.ಆರ್ ಕನ್ನಡದಲ್ಲಿ ಮಾತನಾಡಿದ್ದಾರೆ. ಅವರು ತಮ್ಮ ಸಂಬಂಧಿಕರೊಂದಿಗೆ ಕನ್ನಡ ಮಾತನಾಡುವುದನ್ನು ಗಮನಿಸಿದ ಜೂ. ಎನ್.ಟಿ.ಆರ್ 'ನಮ್ಮ ತಾಯಿ ಕುಂದಾಪುರದವರೇ , ನಾನು ಕನ್ನಡದವರೆ ಅಂತ ಹೇಳಿದ್ರು.
ನನ್ನ ಅಮ್ಮ ಕನ್ನಡದವರು. ಅವರ ಹುಟ್ಟೂರು ಕುಂದಾಪುರ. ಹೀಗೆ ಶುದ್ದ ಕನ್ನಡದಲ್ಲಿ ನಟ ಜೂನಿಯರ್ ಎನ್.ಟಿ.ಆರ್ ಕನ್ನಡದೊಂದಿಗೆ ಬೆಸೆದುಕೊಂಡ ತಮ್ಮ ಸಂಬಂಧದ ಕತೆ ಬಿಚ್ಚಿಟ್ಟಾಗ ಅಲ್ಲಿದ್ದ ಅಷ್ಟೂ ಕನ್ನಡಿಗರಲ್ಲಿ ಒಂದು ಕ್ಷಣ, ರೋಮಾಂಚನ, ಸಂಭ್ರಮ. ಜೂನಿಯರ್ ಎನ್.ಟಿ.ಆರ್ ಕನ್ನಡ ಪ್ರೇಮ ನೋಡಿ ಸಖತ್ ಥ್ರಿಲ್ ಆಗಿದ್ರು. ಹೀಗೆ ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಎನ್.ಟಿ.ಆರ್ ಆಕ್ಟ್ ಮಾಡಿದ್ರು ಅಚ್ಚರಿ ಇಲ್ಲ ಬಿಡಿ.
-ಶೃತಿ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.