ಸುಳ್ಳು ಸುದ್ದಿ ಪ್ರಕಟಿಸಿದರೆ ಪತ್ರಕರ್ತ ಸದಸ್ಯತ್ವದಿಂದ ಅಜೀವ ನಿಷೇಧ : ಆದೇಶ ಹಿಂಪಡೆದ ಕೇಂದ್ರ ಸರ್ಕಾರ

By Suvarna Web DeskFirst Published Apr 3, 2018, 3:26 PM IST
Highlights

ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಟೀಕೆ ವ್ಯಕ್ತವಾದ ಕಾರಣ ಪ್ರಧಾನ ಮಂತ್ರಿಯವರ ಕಚೇರಿಯ ಸಲಹೆಯ ಮೇರೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶವನ್ನು ಹಿಂಪಡಿದಿದೆ.

ನವದೆಹಲಿ(ಏ.03): ಸುಳ್ಳು ಸುದ್ದಿ ಪ್ರಕಟಿಸಿದರೆ ಅಥವಾ ಹರಡಿದರೆ ಪತ್ರಕರ್ತ ಸದಸ್ಯತ್ವದಿಂದ ನಿರ್ಬಂಧಿಸುವುದು ಹಾಗೂ ನಿಷೇಧಿಸುವ ' ಪತ್ರಕರ್ತರ ಸುಳ್ಳು ಸುದ್ದಿ ನಿಯಂತ್ರಣ ತಿದ್ದಿಪಡಿಯ ಕ್ರಮ ಅನುಷ್ಠಾನಗೊಳಿಸುವ ನಿಯಮಗಳ' ಮಸೂದೆಯನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಂಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಟೀಕೆ ವ್ಯಕ್ತವಾದ ಕಾರಣ ಪ್ರಧಾನ ಮಂತ್ರಿಯವರ ಕಚೇರಿಯ ಸಲಹೆಯ ಮೇರೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶವನ್ನು ಹಿಂಪಡಿದಿದೆ. ಸುಳ್ಳು ಸುದ್ದಿ ಪ್ರಕಟಿಸುವುದಕ್ಕೆ ಸಂಬಂಧಿಸಿದಂತೆ ಭಾರತದ ಪತ್ರಿಕಾ ಮಂಡಳಿ ಹಾಗೂ ವಾರ್ತಾ ಪ್ರಸಾರಕರ ಸಂಘಟನೆ ಯಾವುದೇ ನಿರ್ಧಾರ ಕೈಗೊಳ್ಳಬಹುದು' ಎಂದು ಸಲಹೆ ನೀಡಿದೆ.

ನಿನ್ನೆ ಜಾರಿಗೊಳಿಸಿದ್ದ ಮಸೂದೆಯ ಪ್ರಕಾರ ಮೊದಲ ಬಾರಿ ಉಲ್ಲಂಘಿಸಿದರೆ 6 ತಿಂಗಳ ನಿಷೇಧ, 2ನೇ ಬಾರಿಗೆ ಒಂದು ವರ್ಷ ಹಾಗೂ ಮೂರನೇ ಬಾರಿ ಸುಳ್ಳು ಸುದ್ದಿ ಪ್ರಕಟಿಸಿದರೆ ಶಾಶ್ವತವಾಗಿ ರದ್ದುಗೊಳಿಸಬಹುದಾಗಿತ್ತು. ಪತ್ರಿಕೆಗಳಿಗೆ ಸಂಬಂಧಿಸಿದಂತೆ ಪಿಟಿಐ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಎನ್'ಬಿಎ ನಿರ್ಧಾರ ಕೈಗೊಳ್ಳುತ್ತದೆ. ಒಮ್ಮೆ ದೂರು ದಾಖಲಾದರೆ ಅಮಾನತು ನಿರ್ಣಯ ಕೈಗೊಳ್ಳಬಹುತ್ತಿತ್ತು.

click me!