ಮುಂದುವರೆದ ತೈಲ ಬೆಲೆ ಇಳಿಕೆ ಎಂಬ ಹಾವು ಏಣಿ ಆಟ..!

First Published Jun 3, 2018, 12:42 PM IST
Highlights

ದೇಶದಲ್ಲಿ ತೈಲ ಬೆಲೆ ಎಂಬ ಹಾವು ಏಣಿಯ ಆಟ ಮುಂದುವರೆದಿದ್ದು, ಸತತ ಐದನೇ ದಿನವೂ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇಂದು ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 9 ಪೈಸೆಗಳಷ್ಟು ಇಳಿಕೆಯಾಗಿದೆ.

ನವದೆಹಲಿ(ಜೂ.3): ದೇಶದಲ್ಲಿ ತೈಲ ಬೆಲೆ ಎಂಬ ಹಾವು ಏಣಿಯ ಆಟ ಮುಂದುವರೆದಿದ್ದು, ಸತತ ಐದನೇ ದಿನವೂ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇಂದು ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 9 ಪೈಸೆಗಳಷ್ಟು ಇಳಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ. 78.11 ಆಗಿದ್ದರೆ, ಮುಂಬೈನಲ್ಲಿ ರೂ. 85.92 ಆಗಿದೆ. ಇನ್ನು ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆ ರೂ. 80.75 ಇದ್ದರೆ, ಚೆನೈನಲ್ಲಿ ರೂ. 81.9 ಆಗಿದೆ.

ಇದೇ ವೇಳೆ ಇಂದು ಡಿಸೇಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ದೆಹಲಿಯಲ್ಲಿ ರೂ. 69.11, ಕೋಲ್ಕತ್ತಾದಲ್ಲಿ ರೂ. 71.66, ಮುಂಬೈನಲ್ಲಿ ರೂ. 73.58 ಮತ್ತು ಚೆನೈನಲ್ಲಿ ರೂ. 72.92 ಆಗಿದೆ. 

ಕಳೆದ ಮೇ. 30 ರಿಂದ ಸತತವಾಗಿ ತೈಲಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ವ್ಯತ್ಯಾಸಕ್ಕೆ ಅನುಗುಣವಾಗಿ ಬೆಲೆ ಇಳಿಕೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

click me!