ಪ್ರೆಸ್'ಮೀಟ್'ನಲ್ಲಿ ಜಿಗ್ನೇಶ್ ಮೇವಾನಿಗೆ ಪತ್ರಕರ್ತರೊಬ್ಬರು ನೀಡಿದ ಸಲಹೆಯೇನು ಗೊತ್ತಾ?

Published : Jan 09, 2018, 07:12 PM ISTUpdated : Apr 11, 2018, 12:42 PM IST
ಪ್ರೆಸ್'ಮೀಟ್'ನಲ್ಲಿ ಜಿಗ್ನೇಶ್ ಮೇವಾನಿಗೆ ಪತ್ರಕರ್ತರೊಬ್ಬರು ನೀಡಿದ ಸಲಹೆಯೇನು ಗೊತ್ತಾ?

ಸಾರಾಂಶ

3 ತಿಂಗಳ ಹಿಂದೆ ಜಿಗ್ನೇಶ್ ಮೇವಾನಿ ಪತ್ರಿಕಾಗೋಷ್ಠಿಗೆ ಕೆಲವೇ ಕೆಲವು ಎಡಪಂಥೀಯ ಒಲವುಳ್ಳ ಪತ್ರಕರ್ತರು ಬರುತ್ತಿದ್ದರು.

ನವದೆಹಲಿ (ಜ.09): 3 ತಿಂಗಳ ಹಿಂದೆ ಜಿಗ್ನೇಶ್ ಮೇವಾನಿ ಪತ್ರಿಕಾಗೋಷ್ಠಿಗೆ ಕೆಲವೇ ಕೆಲವು ಎಡಪಂಥೀಯ ಒಲವುಳ್ಳ ಪತ್ರಕರ್ತರು ಬರುತ್ತಿದ್ದರು.

ಗುಜರಾತ್ ಚುನಾವಣೆ ನಂತರ ಜಿಗ್ನೇಶ್ ಮೇವಾನಿ ಶುಕ್ರವಾರ  ದೆಹಲಿಯ ಪ್ರೆಸ್‌'ಕ್ಲಬ್‌' ಗೆ ಬಂದಿದ್ದಾಗ ದೊಡ್ಡ ಪತ್ರಕರ್ತರ ದಂಡೇ ನೆರೆದಿತ್ತು. ಜೊತೆಗೆ ಕ್ಯಾಮೆರಾಗಳು, ಫೋಟೋಗ್ರಾಫರ್‌ಗಳು ಬೇರೆ. ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ಬಹಳ ಎತ್ತರಕ್ಕೆ ಬೆಳೆಯುತ್ತಾರೆ ನೋಡುತ್ತಿರಿ ಎಂದು ಆಗಿನಿಂದಲೇ ಸೆಲ್ಫಿ ತೆಗೆದಿಟ್ಟುಕೊಂಡಿದ್ದ ಯುವ ಪತ್ರಕರ್ತರೇ ಈಗ ಪ್ರೆಸ್‌ಕ್ಲಬ್‌ನಲ್ಲಿ ನಿಂತು ಜಿಗ್ನೇಶ್ ಮೇವಾನಿ ಜೊತೆ ಸೆಲ್ಫಿ ಪ್ಲೀಸ್ ಎನ್ನುತ್ತಿದ್ದರು. ಆದರೆ ಈ ತಳ್ಳಾಟ ನೂಕಾಟ ಪ್ರಶ್ನೆಗಳ ಸುರಿಮಳೆ ನಡುವೆಯೇ ಜಿಗ್ನೇಶ್ ಮೇವಾನಿಗೆ ಬಂದು ಕೈಕುಲುಕಿದ ವಯಸ್ಸಾದ ಪತ್ರಕರ್ತರೊಬ್ಬರು ‘ಸ್ವಲ್ಪವೇ ಮಾತನಾಡು. ಚೆನ್ನಾಗಿ ಮಾತನಾಡುತ್ತೀಯಾ. ಬಹಳ ಮಾತನಾಡಿದರೆ ಬೇಗ ಜನಪ್ರಿಯತೆ ಇಳಿಯುತ್ತದೆ’ ಎಂದು ಕಿವಿಯಲ್ಲಿ ಹೇಳಿ ಬೆನ್ನುತಟ್ಟಿ ಹೋದರು.

 

ಇಂಡಿಯಾ ಗೇಟ್ ನ ಆಯ್ದ ಭಾಗಗಳು ಪ್ರಶಾಂತ್ ನಾತು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೈದ್ಯಾಧಿಕಾರಿಯಿಂದ ನರ್ಸ್‌ಗೆ ನಿರಂತರ ಕಿರುಕುಳ, ಆಸ್ಪತ್ರೆಯಲ್ಲೇ 20ಕ್ಕೂ ಹೆಚ್ಚು ನಿದ್ರೆ ಮಾತ್ರೆ ಸೇವಿಸಿ ಆತ್ಮ*ಹತ್ಯೆ ಯತ್ನ!
2 ಮಕ್ಕಳಾದ ನಂತರವು ಮುಸ್ಲಿಂ ಸೊಸೆಯ ಒಪ್ಪಿಕೊಳ್ಳದ ಪೋಷಕರು: ವಿಚ್ಛೇದನ ನೀಡಲು ಮುಂದಾದ ಮಗನಿಂದ ಆಯ್ತು ಘೋರ ಅಪರಾಧ