ನಂ. 1 ಶ್ರೀಮಂತ ಅಮೆಜಾನ್ ಮುಖ್ಯಸ್ಥನ ಡೈವೋರ್ಸ್: ಪತ್ನಿಗೆ 5 ಲಕ್ಷ ಕೋಟಿ?

By Web Desk  |  First Published Jan 10, 2019, 8:41 AM IST

ನಂ.1 ಶ್ರೀಮಂತ, ಅಮೆಜಾನ್ ಸಂಸ್ಥಾಪಕ ಬೆಜೋಸ್‌ ಡೈವೋರ್ಸ್ಸ್: ಪತ್ನಿಗೆ 5 ಲಕ್ಷ ಕೋಟಿ ಜೀವನಾಂಶ?


ನ್ಯೂಯಾರ್ಕ್[ಜ.10]: ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಾದ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಅವರು ತಮ್ಮ ಪತ್ನಿಗೆ ವಿಚ್ಛೇದನ ನೀಡುತ್ತಿರುವುದಾಗಿ ಘೋಷಿಸಿದ್ದಾರೆ.

‘ದೀರ್ಘಾಕಾಲೀನದಿಂದ ನಾವು ಪ್ರತ್ಯೇಕವಾಗಿಯೇ ವಾಸವಿದ್ದೆವು. ಇದೀಗ ನಮ್ಮ ಜೀವನದ ವಿಚಾರವೊಂದನ್ನು ಜನತೆಗೆ ತಿಳಿಸಲು ಇಚ್ಚಿಸುತ್ತಿದ್ದೇವೆ. ನಾನು(ಜೆಫ್‌ ಬಿಜೋಸ್‌) ಮತ್ತು ಮ್ಯಾಕ್‌ಕೆನ್ಝಿ ಬಿಜೋಸ್‌(48) ಪರಸ್ಪರ ವಿಚ್ಛೇದನಕ್ಕೆ ಮುಂದಾಗಿದ್ದೇವೆ,’ ಎಂದು ಜಂಟಿ ಹೇಳಿಕೆಯನ್ನು ಟ್ವಿಟರ್‌ ಮೂಲಕ ಬಿಡುಗಡೆ ಮಾಡಿದ್ದಾರೆ.

pic.twitter.com/Gb10BDb0x0

— Jeff Bezos (@JeffBezos)

Tap to resize

Latest Videos

ಜೆಫ್‌ ಪ್ರಸ್ತುತ 10.50 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದು, ಅದರ ಅರ್ಧ ಪಾಲನ್ನು ಅಂದರೆ ಅಂದಾಜು 5 ಲಕ್ಷ ಕೋಟಿ ರು.ಗಳನ್ನು ಮ್ಯಾಕ್‌ಕೆನ್ಝಿ ಅವರಿಗೆ ನೀಡಬೇಕಾಗಿ ಬರಬಹುದು ಎನ್ನಲಾಗಿದೆ.

click me!