ಜೆಡಿಎಸ್'ನಿಂದ ಜನಸಾಮಾನ್ಯರಿಗಾಗಿ ಆರಂಭವಾಗುತ್ತಿದೆ ನೂತನ ಸೇವೆ

Published : Dec 10, 2017, 04:46 PM ISTUpdated : Apr 11, 2018, 12:46 PM IST
ಜೆಡಿಎಸ್'ನಿಂದ ಜನಸಾಮಾನ್ಯರಿಗಾಗಿ ಆರಂಭವಾಗುತ್ತಿದೆ ನೂತನ ಸೇವೆ

ಸಾರಾಂಶ

ರಾಜ್ಯ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗುತ್ತಿರುವ ಜೆಡಿಎಸ್ ಈಗಾಗಲೇ ಸಾಮಾಜಿಕವಾಗಿ ಸಕ್ರಿಯವಾಗಿದ್ದು, ಪಕ್ಷದ ವಿಚಾರವನ್ನು ರಾಜ್ಯದ ಜನರ ಬೆರಳತುದಿಯಲ್ಲಿಡಲು ಮತ್ತೊಂದು ಹೆಜ್ಜೆ ಇಟ್ಟಿದೆ.

ಬೆಂಗಳೂರು(ಡಿ.10): ರಾಜ್ಯ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗುತ್ತಿರುವ ಜೆಡಿಎಸ್ ಈಗಾಗಲೇ ಸಾಮಾಜಿಕವಾಗಿ ಸಕ್ರಿಯವಾಗಿದ್ದು, ಪಕ್ಷದ ವಿಚಾರವನ್ನು ರಾಜ್ಯದ ಜನರ ಬೆರಳತುದಿಯಲ್ಲಿಡಲು ಮತ್ತೊಂದು ಹೆಜ್ಜೆ ಇಟ್ಟಿದೆ. ‘ನಮ್ಮ ಎಚ್‌ಡಿಕೆ’ ಹೆಸರಲ್ಲಿ ಟ್ವಿಟರ್, ಯೂಟೂಬ್‌ನಂತಹ ಜಾಲತಾಣದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದೆ.

ಇದೀಗ ಜೆಡಿಎಸ್ ನಿಂದ ಮೊಬೈಲ್ ಸೇವೆ ಆರಂಭಿಸುತ್ತಿದ್ದು, ನಿತ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಸುದ್ದಿ ಮೊಬೈಲ್‌ನಲ್ಲಿ ಪಡೆದುಕೊಳ್ಳುವ ಯೋಜನೆಗೆ ಅವರ ತಾಂತ್ರಿಕ ಸಲಹೆಗಾರರು ಯೋಜನೆ ಸಿದ್ಧಪಡಿಸಿದ್ದಾರೆ. ಮೊಬೈಲ್ ಸಂಖ್ಯೆ 9483986999 ಗೆ ಮಿಸ್‌ಕಾಲ್ ಕೊಟ್ಟರೆ ಮೊಬೈಲ್ ಮಾಲೀಕರ ಸಂಖ್ಯೆ ನೋಂದಣಿಯಾಗಲಿದೆ.  ಎಚ್.ಡಿ. ಕುಮಾರಸ್ವಾಮಿ ಅವರ ಭಾಷಣ, ಸುದ್ದಿಗೋಷ್ಠಿ ಸೇರಿದಂತೆ ಎಲ್ಲಾ ಮಾಹಿತಿಯು ಸಾಮಾನ್ಯ ಜನರ ಮೊಬೈಲ್‌ನಲ್ಲಿ ಲಭ್ಯವಾಗಲಿದೆ.

ಪ್ರತಿದಿನ ಮೂರು ಬಾರಿ ಮೊಬೈಲ್ ಮಾಲೀಕರಿಗೆ ದೊರಕಲಿದೆ. ಸುದ್ದಿಗಳ ಜತೆಗೆ ಕುಮಾರಸ್ವಾಮಿ ಅವರ ಕಾರ್ಯಕ್ರಮಗಳ ಆಡಿಯೋ, ವಿಡಿಯೋಗಳನ್ನು ಕಳುಹಿಸಲಾಗುತ್ತದೆ. ಪ್ರತಿನಿತ್ಯ ಬೆಳಗ್ಗೆ ಕುಮಾರಸ್ವಾಮಿ ಅವರ ಕಾರ್ಯಕ್ರಮದ ವಿವರಗಳನ್ನು ನೀಡುವ ಮೂಲಕ ಆರಂಭವಾಗುವ ಸುದ್ದಿ ಸೇವೆಯು ದಿನದ ಅಂತ್ಯಕ್ಕೆ ರೌಂಡ್ ಆಪ್ ನೀಡುವ ಮೂಲಕ ಮುಕ್ತಾಯವಾಗಲಿದೆ ಎಂದು ಜೆಡಿಎಸ್ ಪ್ರಕಟಣೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!