ಸಿಎಂ ಪರ ಹೊರಟ್ಟಿ ಬ್ಯಾಟಿಂಗ್

By Suvarna Web DeskFirst Published Aug 1, 2017, 9:41 PM IST
Highlights

ಸಮಾಜಕ್ಕೆಮಾದರಿಯಾಗಬೇಕಾದನಾಡಿನಮಠಾಧೀಶರುಬೀದಿಜಗಳಮಾಡುತ್ತಿರುವುದು ಸರಿಯಿಲ್ಲ.

ಬಾಗಲಕೋಟೆ(ಆ.01): ಮಠಾಧೀಶರು ಒಂದಾದರೆ ಒಳ್ಳೆಯದು ಇಲ್ಲವಾದರೆ ಅವರ ಸ್ಥಾನಕ್ಕೆ ಕಂಠಕ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಜೆಡಿಎಸ್'ನ ವಿಧಾನ ಪರಿಷತ್ ಸದಸ್ಯ ಬಸವರಾಜ್​ ಹೊರಟ್ಟಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಧರ್ಮ ವಿಚಾರದಲ್ಲಿ ಸಿಎಂ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಶೀಘ್ರದಲ್ಲಿಯೇ ಎಲ್ಲ ಸ್ವಾಮೀಜಿಗಳನ್ನು ಭೇಟಿ ಮಾಡಿ ಸಭೆ ನಡೆಸುತ್ತೇವೆ. ಈ ಮಧ್ಯೆ ಸಿದ್ದಗಂಗಾ ಶ್ರೀಗಳ ನೇತೃತ್ವದಲ್ಲೇ ಸಭೆಯಾದರೆ ನೂರಕ್ಕೆ ನೂರರಷ್ಟು ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ಹೇಳಿದರು.

ಸಮಾಜಕ್ಕೆ ಮಾದರಿಯಾಗಬೇಕಾದ ನಾಡಿನ ಮಠಾಧೀಶರು ಬೀದಿ ಜಗಳ ಮಾಡುತ್ತಿರುವುದು ಸರಿಯಿಲ್ಲ. ಸಿಎಂಗೆ ಮನವಿ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಲಿಂಗಾಯತರನ್ನ ಒಡೆಯುವ ಕೆಲಸವನ್ನು ಸಿಎಂ ಮಾಡಿಲ್ಲ. ಇದೇ ತಿಂಗಳು 22 ರಂದು ಕೂಡಲಸಂಗಮದಲ್ಲಿ ಸ್ವಾಮಿಜಿಗಳು ಸಭೆ ಸೇರಲಿದ್ದು, ಅನಂತರ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಹೊರಟ್ಟಿ ಹೇಳಿದ್ದಾರೆ.

click me!