ಮೋದಿ ವಿರುದ್ಧ ಎಚ್.ಡಿ ದೇವೇಗೌಡ ಗರಂ

Published : Jan 02, 2019, 07:43 AM IST
ಮೋದಿ ವಿರುದ್ಧ ಎಚ್.ಡಿ ದೇವೇಗೌಡ ಗರಂ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ  ಜೆಡಿಎಸ್ ಮುಖಂಡ ಮಾಜಿ ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಸಾಲಮನ್ನಾ ಕುರಿತ ಮೋದಿ ಹೇಳಿಕೆ ವಿರುದ್ಧ ಕಿಡಿ ಕಾರಿದ್ದಾರೆ. 

ನವದೆಹಲಿ: ಸಮ್ಮಿಶ್ರ ಸರ್ಕಾರದ ಸಾಲ ಮನ್ನಾ ಯೋಜನೆ ಕುರಿತ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ತು, ಈಗ ಸ್ವತಃ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಕೂಡ ತೀವ್ರ ಕಿಡಿಕಾರಿದ್ದಾರೆ. 

ಪ್ರಧಾನಿ ಹೇಳಿದಂತೆ ಸಾಲ ಮನ್ನಾ ಯೋಜನೆ ತಲುಪಿದ್ದು 800 ಮಂದಿಯನ್ನಲ್ಲ, 60 ಸಾವಿರ ರೈತರನ್ನು ತಲುಪಿದೆ. ಪ್ರಧಾನಿ ಈ ರೀತಿ ವ್ಯಂಗ್ಯವಾಗಿ ಮಾತನಾಡುವುದನ್ನು ಬಿಡಬೇಕು. 

ಮುಂದಿನ ದಿನಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲ ಪಡೆದಿರುವ 21.7 ಲಕ್ಷ ಮತ್ತು ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದಿರುವ 18.3ಲಕ್ಷ ರೈತರನ್ನು ಈ ಯೋಜನೆ ತಲುಪಲಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ದೇಶದಲ್ಲಿ ದೇವರಿಗೇ ಜಾಗವಿಲ್ಲ; ಬೈಬಲ್, ಕುರಾನ್ ಸಿಕ್ಕರೆ ನೇರ ಜೈಲು, ಮರಣದಂಡನೆ!
ಟ್ರಾಫಿಕ್ ದಂಡ ಇನ್ನೂ ಕಟ್ವಿಲ್ವಾ? ಹೀಗೆ ಭಾರತದಲ್ಲಿ ಬಾಕಿ ಉಳಿದಿರುವ ಮೊತ್ತ 39000 ಕೋಟಿ ರೂ