ಜೆಡಿಎಸ್‌ ಮಾಜಿ ಶಾಸಕ ನಿಧನ

By Web Desk  |  First Published Nov 27, 2018, 12:34 PM IST

ಜೆಡಿಎಸ್ ಮಾಜಿ ಶಾಸಕ ಎಚ್ ಎಸ್ ಪ್ರಕಾಶ್ ನಿಧನ | ಹೃದಯ ಸಂಬಂಧಿತ ಕಾಯಿಲೆ ಹಾಗೂ ಕಿಡ್ನಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಹೆಚ್ ಎಸ್ ಪ್ರಕಾಶ್ 


ಬೆಂಗಳೂರು (ನ. 27): ಅನಾರೋಗ್ಯದಿಂದ ಬಳಲುತ್ತಿದ್ದ ಜೆಡಿಎಸ್ ಮಾಜಿ ಶಾಸಕ ಹೆಚ್ ಎಸ್ ಪ್ರಕಾಶ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. 

ಹೃದಯ ಸಂಬಂಧಿತ ಕಾಯಿಲೆ ಹಾಗೂ ಕಿಡ್ನಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹೆಚ್ ಎಸ್ ಪ್ರಕಾಶ್ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು.  ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. 

Tap to resize

Latest Videos

ಹಾಸನ ಸಣ್ಣಯ್ಯ ಪ್ರಕಾಶ್ ಹಾಸನ ಮೂಲದವರು. 1994 ರಲ್ಲಿ ಮೊದಲ ಬಾರಿಗೆ ಹಾಸನದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ. ಗೆದ್ದು ಶಾಸಕರಾಗುತ್ತಾರೆ. 1999 ರ ಚುನಾವಣೆಗೂ ಸ್ಪರ್ಧಿಸುತ್ತಾರೆ. ಆದರೆ ಮತದಾರ ಕೈ ಹಿಡಿಯಲಿಲ್ಲ. ಸೋಲನುಭವಿಸುತ್ತಾರೆ. ನಂತರ ಸತತವಾಗಿ 2004, 2008 ಮತ್ತು 2013 ನೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವನ್ನು ಸಾಧಿಸುತ್ತಾರೆ. 

click me!