ಮಂಡ್ಯ ದುರಂತ ಮರೆವ ಮುನ್ನ ಮತ್ತೆರಡು ಬಸ್ ಅಪಘಾತ

Published : Nov 27, 2018, 12:26 PM IST
ಮಂಡ್ಯ ದುರಂತ ಮರೆವ ಮುನ್ನ ಮತ್ತೆರಡು ಬಸ್ ಅಪಘಾತ

ಸಾರಾಂಶ

ಮಂಡ್ಯದಲ್ಲಿ ಬಸ್ ಅಪಘಾತವಾಗಿ 30 ಮಂದಿ ಪ್ರಾಣ ಕಳೆದುಕೊಂಡ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೆರಡು ಬಸ್ ಅಪಘಾತವಾಗಿದೆ. 

ಕುಶಾಲನಗರ/ಯಲ್ಲಾಪುರ: ಮಂಡ್ಯ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ಭೀಕರ ಬಸ್ ದುರಂತ ಮರೆಯುವ ಮುನ್ನವೇ ರಾಜ್ಯದ ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಗಳಲ್ಲಿ ಸೋಮವಾರ ಮತ್ತೆರಡು ಪ್ರತ್ಯೇಕ ಬಸ್ ಅಪಘಾತಗಳು ನಡೆದಿವೆ. 

ಮದುವೆ ಸಮಾರಂಭಕ್ಕೆಂದು ಹೊರಟಿದ್ದ ಎರಡು ಬಸ್‌ಗಳು ಚಾಲಕರ ನಿಯಂತ್ರಣ ಪಟ್ಟಿ ಪಲ್ಟಿಯಾಗಿದ್ದು ಅದೃಷ್ಟವಶಾತ್ ಪ್ರಾಣಾ ಪಾಯವಾಗಿಲ್ಲ. ಹಾಸನ-ಮಡಿಕೇರಿ ಮುಖ್ಯ ರಸ್ತೆಯ ಕೊಣನೂರು ಪಟ್ಟಣದ ಉಳ್ಳೇನಹಳ್ಳಿ ಸಮೀಪದ ಭತ್ತದ ಗದ್ದೆಗೆ ಸೋಮವಾರ ಮಧ್ಯಾಹ್ನ ಖಾಸಗಿ ಬಸ್ ಉರುಳಿ ಬಿತ್ತು. 

ಬಸ್‌ನಲ್ಲಿದ್ದ 46 ಜನರಿಗೆ ಗಾಯಗಳಾಗಿದ್ದು ಅವರಲ್ಲಿ 12  ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಮತ್ತೊಂದು ಬಸ್ ಅಪಘಾತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ. ಬೇಡ್ತಿ ನದಿ ಸೇತುವೆಯ ತಿರುವಿನಲ್ಲಿ ಬಸ್ಸು ಉರುಳಿ 13 ಪ್ರಯಾಣಿಕರು ಗಾಯಗೊಂಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ