
ಮೈಸೂರು(ಅ.08): ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸ ಬಯಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜೆಡಿಎಸ್ ಮುಖಂಡರು ರಣತಂತ್ರ ರೂಪಿಸುತ್ತಿದ್ದಾರೆ.
ಮಾಜಿ ಸಂಸದ ಎಚ್. ವಿಶ್ವನಾಥ್, ಶಾಸಕ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್ ಮತ್ತಿತರರು ಸತತ ಎರಡು ದಿನ ಸಿದ್ದರಾಮಯ್ಯ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದಲ್ಲದೆ ಶನಿವಾರ ರಾಜ್ಯ ಬಿಜೆಪಿ ಉಪಾ‘್ಯಕ್ಷರೂ ಆದ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಬಿಜೆಪಿಯಲ್ಲಿ ರುವ ಶ್ರೀನಿವಾಸಪ್ರಸಾದ್'ರನ್ನು ಜೆಡಿಎಸ್ ಮುಖಂಡರು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಭೇಟಿ ಮಹತ್ವ:
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸುವುದೇ ಪ್ರಭಾವಿ ರಾಜಕಾರಣಿಗಳಾದ ವಿ. ಶ್ರೀನಿವಾಸಪ್ರಸಾದ್ ಮತ್ತು ಎಚ್. ವಿಶ್ವನಾಥ್ ಅವರ ಗುರಿಯಾಗಿದ್ದರಿಂದ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಚುನಾವಣೆಯಲ್ಲಿ ಏನೆಲ್ಲಾ ಕಾರ್ಯತಂತ್ರ ಹೆಣೆಯಬಹುದು ಎಂಬ ಕುರಿತು ಚರ್ಚೆ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಜಿ.ಟಿ. ದೇವೇಗೌಡ, ನಾನು ಮತ್ತು ವಿ. ಶ್ರೀನಿವಾ ಸಪ್ರಸಾದ್ ಅವರು 1976 ರಿಂದಲೂ ಪರಿಚಯ. ಅಂದಿನಿಂದಲೂ ನನ್ನ ಬಗ್ಗೆ ಪ್ರೀತಿ, ವಿಶ್ವಾಸ ಹೊಂದಿದ್ದಾರೆ. ನನ್ನ ಪರ ಅನೇಕ ಚುನಾವಣೆಯಲ್ಲಿ ಪ್ರಚಾರ ನಡೆ ಸಿದ್ದಾರೆ. ಈಗ ಅವರ ನಿವಾಸಕ್ಕೆ ತೆರಳಿ ಹಿಂದಿನ ಮತ್ತು ಮುಂದಿನ ರಾಜಕೀಯದ ಬಗ್ಗೆ ಮಾತನಾಡಿದೆವು. ಬಿಜೆಪಿಯ ಗುರಿ ಒಂದೇ, ಕಾಂಗ್ರೆಸ್ ಮುಕ್ತ ಕರ್ನಾಟಕ. ಆದ್ದರಿಂದ ನಾವು ಅವರನ್ನು ಭೇಟಿಯಾಗಿ ಮಾತನಾಡಿದ್ದೇವೆ ಅಷ್ಟೆ ಎಂದರು.
ಉಳಿದೆಲ್ಲಾ ಕ್ಷೇತ್ರಕ್ಕಿಂತ ಚಾಮುಂಡೇಶ್ವರಿ ಕ್ಷೇತ್ರದ ರಾಜಕೀಯ ಸಿಎಂ ಸಿದ್ದರಾಮಯ್ಯ ಅವರ ಪ್ರವೇಶ ದಿಂದಾಗಿ ಹೆಚ್ಚು ಮಹತ್ವ ಹಾಗೂ ರಂಗು ಪಡೆದಿದೆ. ಆರೋಪ, ಪ್ರತ್ಯಾರೋಪ ರಾಜಕೀಯ ವಿಶ್ಲೇಷಣೆ, ಜಾತಿ ಲೆಕ್ಕಾಚಾರ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.