ಶತ್ರುದಾಳಿಗೆ ಉ.ಕೊರಿಯಾ ಸಿದ್ಧ ಮಾಡಿದೆ ರೋಗಾಣು ಬಾಂಬ್!

Published : Oct 08, 2017, 10:49 AM ISTUpdated : Apr 11, 2018, 12:45 PM IST
ಶತ್ರುದಾಳಿಗೆ ಉ.ಕೊರಿಯಾ ಸಿದ್ಧ ಮಾಡಿದೆ ರೋಗಾಣು ಬಾಂಬ್!

ಸಾರಾಂಶ

ಸತತವಾಗಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿ ವಿಶ್ವಕ್ಕೇ ಸವಾಲೊಡ್ಡಿರುವ ಉತ್ತರ ಕೊರಿಯಾವನ್ನು ಸದೆಬಡಿಯಲು ಅಮೆರಿಕ ಯುದ್ಧ ಸಾರಬಹುದು, ಎರಡೂ ದೇಶಗಳ ನಡುವೆ ಅಣ್ವಸ್ತ್ರ ಸಮರವೇ ನಡೆಯಬಹುದು ಎಂಬ ಆತಂಕ ವ್ಯಕ್ತವಾಗುತ್ತಿರುವಾಗಲೇ, ಜೈವಿಕ ಯುದ್ಧದ ಭೀತಿಯೂ ಕಾಡಲು ಆರಂಭವಾಗಿದೆ.

ಲಂಡನ್(ಅ.08): ಸತತವಾಗಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿ ವಿಶ್ವಕ್ಕೇ ಸವಾಲೊಡ್ಡಿರುವ ಉತ್ತರ ಕೊರಿಯಾವನ್ನು ಸದೆಬಡಿಯಲು ಅಮೆರಿಕ ಯುದ್ಧ ಸಾರಬಹುದು, ಎರಡೂ ದೇಶಗಳ ನಡುವೆ ಅಣ್ವಸ್ತ್ರ ಸಮರವೇ ನಡೆಯಬಹುದು ಎಂಬ ಆತಂಕ ವ್ಯಕ್ತವಾಗುತ್ತಿರುವಾಗಲೇ, ಜೈವಿಕ ಯುದ್ಧದ ಭೀತಿಯೂ ಕಾಡಲು ಆರಂಭವಾಗಿದೆ.

ಒಂದು ವೇಳೆ ತನ್ನ ಮೇಲೆ ಯಾವುದೇ ದೇಶ ಯುದ್ಧ ಸಾರಿದರೆ ಸಾಮಾನ್ಯ ಶಸ್ತ್ರಾಸ್ತ್ರಗಳನ್ನಷ್ಟೇ ಬಳಸದೇ ಪ್ಲೇಗ್, ಸಿಡುಬು, ಕಾಮಾಲೆ, ಕಾಲರಾ, ಟೈಫಾಯ್ಡ್‌'ನಂತಹ ಕಾಯಿಲೆಗಳನ್ನು ಹಬ್ಬಿಸುವಂತಹ ಜೈವಿಕ ಅಸ್ತ್ರವನ್ನು ಉತ್ತರ ಕೊರಿಯಾ ಪ್ರಯೋಗಿಸುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ. ಈಗಾಗಲೇ ಉತ್ತರ ಕೊರಿಯಾ ಹಲವಾರು ರೋಗ ತರುವ ಸೋಂಕುಗಳನ್ನು ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿದೆ.

ಯುದ್ಧ ನಡೆದರೆ ಕ್ಷಿಪಣಿ, ಬಾಂಬ್ ಅಥವಾ ವಿಮಾನಗಳ ಮೂಲಕ ಈ ಸೋಂಕನ್ನು ಹಬ್ಬಿಸಿ ಭರ್ಜರಿ ಹೊಡೆತ ನೀಡಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆ್ಯಂಪ್ಲಿ ಫೈ ಎಂಬ ಸಂಸ್ಥೆ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯಗಳು ಅಧ್ಯಯನ ನಡೆಸಿ ವರದಿಯೊಂದನ್ನು ಸಿದ್ಧಪಡಿಸಿವೆ. ಆ್ಯಂಥ್ರಾಕ್ಸ್, ವಿಷಕಾರಿ ಜ್ವರ ತರುವ ಸೋಂಕುಗಳು, ಪ್ಲೇಗ್, ಸಿಡುಪು, ಕಾಲರಾ, ಕಾಮಾಲೆಯಂತಹ ರೋಗಗಳನ್ನು ಉಂಟು ಮಾಡುವ ಅಸ್ತ್ರಗಳನ್ನು ತನ್ನ ಕಾರ್ಖಾನೆಗಳಲ್ಲಿ ಉತ್ತರ ಕೊರಿಯಾ ಸಂಗ್ರಹಿಸಿಟ್ಟುಕೊಂಡಿದೆ ಎಂದು ವರದಿ ತಿಳಿಸಿದೆ.

ಈ ಹಿಂದೆ ಹಲವು ಸಂದರ್ಭಗಳಲ್ಲಿ ತನ್ನ ಅಸ್ತ್ರಗಳನ್ನು ಪರೀಕ್ಷಿಸಲು ಉತ್ತರ ಕೊರಿಯಾದ ಮಿಲಿಟರಿ, ಮಾನವರನ್ನೇ ಗುರಿಯಾಗಿಸಿಕೊಂ ಡಿದ್ದ ಉದಾಹರಣೆ ಇದೆ. ಜೈವಿಕ ಯುದ್ಧಕ್ಕೆ ಸಂಬಂಧಿಸಿದಂತೆ ಉತ್ತರ ಕೊರಿಯಾದ 23 ಸಾವಿರ ವೆಬ್ ಸೈಟ್‌ಗಳ ವರದಿ ಆಧರಿಸಿ ಈ ವರದಿ ತಯಾರಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ಶಾಸನ ಕಾಂಗ್ರೆಸ್ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಪ್ರಲ್ಹಾದ್ ಜೋಶಿ ಕಿಡಿ
ಪ್ರೀತಿಯಿಂದ ಊಟಕ್ಕೆ ಕರೀತಾರೆ ಬೇಡ ಅನ್ನೋಕಾಗುತ್ತಾ: ಡಿ.ಕೆ.ಶಿವಕುಮಾರ್