ಐಟಿ ದಾಳಿಯಿಂದ ಕಲಾವಿದರಿಗೆ ಹಿನ್ನಡೆ ಆಗಲ್ಲ: ಜಯಮಾಲಾ

Published : Jan 05, 2019, 01:42 PM IST
ಐಟಿ ದಾಳಿಯಿಂದ ಕಲಾವಿದರಿಗೆ ಹಿನ್ನಡೆ ಆಗಲ್ಲ: ಜಯಮಾಲಾ

ಸಾರಾಂಶ

ಸ್ಯಾಂಡಲ್‌ವುಡ್ ನಟ, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ | ಐಟಿಯವರು ಅವರ ಕರ್ತವ್ಯ ಮಾಡಿದ್ದಾರೆ ಎಂದ ಜಯಮಾಲಾ | ಐಟಿ ದಾಳಿಯಿಂದ ಕಲಾವಿದರಿಗೆ ಹಿನ್ನಡೆ ಆಗಲ್ಲ | 

ಉಡುಪಿ (ಜ. 05):  ಸ್ಯಾಂಡಲ್ವುಡ್ ಮೇಲೆ ಐಟಿ ದಾಳಿ ವಿಚಾರವಾಗಿ ಸಚಿವೆ, ನಟಿ ಪ್ರತಿಕ್ರಿಯಿಸುತ್ತಾ, ಐಟಿಯವರು ಅವರ ಕೆಲಸ ಮಾಡುತ್ತಾರೆ. ಯಾರಿಗೂ ಇದರಿಂದ ತೊಂದರೆ ಆಗುವುದಿಲ್ಲ.  ಕನ್ನಡ ಚಿತ್ರರಂಗ ಎತ್ತರಕ್ಕೆ ಬೆಳೆದಿರೋದು ಗೊತ್ತಾಗುತ್ತೆ. ಕಲಾವಿದರುಗಳಿಗೆ ಈ ದಾಳಿಯಿಂದ ಏನೂ ಹಿನ್ನಡೆ ಆಗುವುದಿಲ್ಲ ಎಂದು ಹೇಳಿದ್ದಾರೆ.  

ರಾಜ್ ಕುಮಾರ್ ಮಕ್ಕಳು, ಯಶ್, ಸುದೀಪ್ ಬಹಳ ಪ್ರಾಮಾಣಿಕರಿದ್ದಾರೆ.  ಕಲಾವಿದರ ಬಳಿ ಎರಡು ಒಡವೆ, ಬೆಳ್ಳಿತಟ್ಟೆ ಚೊಂಬು ಇರಬಹುದು.  ನಿಯಮ ಪ್ರಕಾರ ಎಲ್ಲರೂ ಟಾಕ್ಸ್ ಕಟ್ಟಲೇಬೇಕು.  ಎಲ್ಲಾ ಕಲಾವಿದರು ಟ್ಯಾಕ್ಸ್ ಕಟ್ಟಿರುತ್ತಾರೆ ಎಂದು ಸಚಿವೆ ಜಯಮಾಲಾ ಹೇಳಿದ್ದಾರೆ. 

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವಾಗಿ ಮಾತನಾಡುತ್ತಾ,  ಶಬರಿಮಲೆ ಬಗ್ಗೆ ಮಾತಾಡಿ ನಾನು ಸುಸ್ತಾಗಿಬಿಟ್ಟೆ.  ನಾನು ಈ ಬಗ್ಗೆ ಏನೂ ಮಾತಾಡುವುದಿಲ್ಲ.  ದೇವರನ್ನು ನಾನು ವ್ಯಾಪಾರಕ್ಕೆ ಇಟ್ಟಿಲ್ಲ.  ನಾನು ದೇವರನ್ನು ನಂಬಿಕೆಯ ತಳಹದಿಯಲ್ಲಿ ನೋಡುವವಳು.  ಶಬರಿಮಲೆಗೆ ಭಕ್ತಿಯಿಂದ ಹೋಗಬೇಕು ಎಂಬುದು ನನ್ನ ಭಾವನೆ ಎಂದು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ