
ಚೆನ್ನೈ[ಸೆ.12]: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಮೃತಪಟ್ಟು ವರ್ಷಗಳೇ ಕಳೆದಿದ್ದರೂ, ಅಲ್ಲಿನ ಜನರಿಗೆ ಎಐಎಡಿಎಂಕೆ ನಾಯಕರಿಗೆ ಇನ್ನೂ ಜಯಾ ಮೇಲಿನ ನಿಷ್ಠೆ, ಭಕ್ತಿ ಕಡಿಮೆಯಾಗಿಲ್ಲ.
ಇದಕ್ಕೆ ಉದಾಹರಣೆ ಎಂಬಂತೆ ಎಐಎಡಿಯಂಕೆ ನಾಯಕ ಭವಾನಿ ಶಂಕರ್ ಎಂಬಾತ ತನ್ನ ಪುತ್ರನ ಮದುವೆಯನ್ನು ಮರೀನಾ ಬೀಚ್‌ನಲ್ಲಿರುವ ಜಯಲಲಿತಾ ಸಮಾಧಿ ಮುಂದೆ ಮಾಡಿ ಸ್ವಾಮಿನಿಷ್ಠೆ ಮೆರೆದಿದ್ದಾನೆ.
ಫಲ ಪುಷ್ಪಗಳಿಂದ ಸಿಂಗರಿಸಲಾದ ಸಮಾಧಿ ಮುಂದೆ ಭವಾನಿಶಂಕರ್‌ರ ಪುತ್ರ ಶಾಂಬಶಿವರಾಮನ್ ಅಲಿಯಾಸ್ ಸತೀಶ್, ದೀಪಿಕಾಳನ್ನು ವರಿಸಿದ್ದಾನೆ. ಅಲ್ಲದೇ ನವ ದಂಪತಿಗಳು ಸಮಾಧಿಗೆ ಸುತ್ತು ಬಂದು ಸಪ್ತಪದಿಯೂ ತುಳಿದಿದ್ದಾರೆ.
ಶಾಸೊತ್ರೕಸ್ತ್ರವಾಗಿ ಮದುವೆ ಕಾರ್ಯಗಳು ನಡೆದಿದ್ದು, ಸತಿ ಪತಿಗಳು ಜಯಾ ಸಮಾಧಿಗೆ ಆರತಿ ಎತ್ತಿ ಗೌರವ ಸಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.