ಶೋಭನ್ ಬಾಬು - ಜಯಲಲಿತಾ ಮದುವೆಯಾಗಿದ್ದಾರಾ ? ಎಲ್ಲಡೆ ವೈರಲ್ ಆಗುತ್ತಿರುವ ವಿವಾಹ ಪ್ರಮಾಣಪತ್ರ

By Suvarna Web desk  |  First Published Dec 13, 2017, 9:10 PM IST

ಎಂಜಿಆರ್, ಜೆಮಿನಿ ಗಣೇಶನ್, ತೆಲುಗು ನಟ ಶೋಭನ್ ಬಾಬು ಹಾಗೂ ಜಯಾಗೂ ವಿವಾಹ ಸಂಬಂಧವಿದ್ದ ಸುದ್ದಿ ಆಗಾಗ ಕೇಳಿರುತ್ತೇವೆ.


ಬೆಂಗಳೂರು(ಡಿ.13): ಜಯಲಲಿತಾ ನಿಧನದ ನಂತರ ಆಕೆಯ ಬಗೆಗಿನ ಹಲವು ಗೌಪ್ಯ ಸುದ್ದಿಗಳು ಎಲ್ಲಡೆ ಗಾಸಿಪ್ ಸುದ್ದಿಗಳಾಗುತ್ತಿವೆ. ಆಕೆ ಬದುಕಿದ್ದಾಗ ಸೊಲ್ಲೆತ್ತದ ಮಂದಿ ಸಾವಿನ ನಂತರ ಪುಂಕಾನುಪುಂಕವಾಗಿ ಖಾಸಗಿ ವಿಷಯಗಳನ್ನು ಹರಡುತ್ತಿದ್ದಾರೆ.

ಹಲವು ದಿನಗಳಿಂದ ಸಾವಿನ ವಿಷಯಗಳ ಬಗ್ಗೆ ಹರಡುತ್ತಿದ್ದ ಸುದ್ದಿ ಇತ್ತೀಚೆಗೆ ಆಕೆಯ ಮದುವೆಯ ಬಗ್ಗೆಯೂ ಪಸರಿಸುತ್ತಿದೆ. ಎಂಜಿಆರ್, ಜೆಮಿನಿ ಗಣೇಶನ್, ತೆಲುಗು ನಟ ಶೋಭನ್ ಬಾಬು ಹಾಗೂ ಜಯಾಗೂ ವಿವಾಹ ಸಂಬಂಧವಿದ್ದ ಸುದ್ದಿ ಆಗಾಗ ಕೇಳಿರುತ್ತೇವೆ.

Tap to resize

Latest Videos

ಈಗಿನ ಹೊಸ ವಿಷಯವೆಂದರೆ ತೆಲುಗು ನಟ ಹಾಗೂ ಜಯಲಲಿತಾಗೂ ರೆಜಿಸ್ಟ'ರ್ ಮದುವೆಯಾಗಿರುವ ಬಗ್ಗೆ.  ಇವರಿಬ್ಬರ ಮದುವೆ ನೋಂದಣಿ ಪತ್ರ, ದತ್ತು ನೀಡಲು ನೋಂದಣಿ ಮಾಡಿಸಿರುವ ಪತ್ರ ಎಲ್ಲಡೆ ವೈರಲ್ ಆಗಿದ್ದು, ಈ ಪತ್ರದಲ್ಲಿ ಜಯಲಲಿತಾ, ಶೋಭನ್ ಬಾಬು ಹಾಗೂ ವಸಂತಮಣಿ ಎಂಬುವವರ ಸಹಿ ಹಾಗೂ ಭಾವಚಿತ್ರಗಳಿವೆ. ಈರೋಡಿನ ಉಪನೋಂದಣಿ ಕಚೇರಿಯಲ್ಲಿ ಮದುವೆಯಾಗಿರುವ ದಾಖಲೆ ಎಲ್ಲಡೆ ವೈರಲ್ ಆಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜವೆಂಬುದನ್ನು ನೋಂದಣಿ ಕಚೇರಿ ಹಾಗೂ ಸರ್ಕಾರವೇ ತಿಳಿಸಬೇಕು.

click me!