ಆಸ್ತಿ ಬೇಡವೆಂದು ಸಾಮ್ರಾಜ್ಯವನ್ನೇ ತೊರೆದಳು ಜಪಾನ್ ರಾಜಕುಮಾರಿ: ರಾಜವೈಭೋಗದ ಬದಲು ಆಕೆ ಕೇಳಿದ್ದೇನು ಗೊತ್ತಾ?

Published : May 20, 2017, 10:42 PM ISTUpdated : Apr 11, 2018, 01:07 PM IST
ಆಸ್ತಿ ಬೇಡವೆಂದು ಸಾಮ್ರಾಜ್ಯವನ್ನೇ ತೊರೆದಳು ಜಪಾನ್ ರಾಜಕುಮಾರಿ: ರಾಜವೈಭೋಗದ ಬದಲು ಆಕೆ ಕೇಳಿದ್ದೇನು ಗೊತ್ತಾ?

ಸಾರಾಂಶ

ಇಡೀ ಜಪಾನ್ ದೇಶವೇ ಈತನ ಹಿಡಿತದಲ್ಲಿದೆ. ಇವರ ಶ್ರೀಮಂತಿಕೆಯನ್ನು ಅಳೆಯೋದಕ್ಕೆ ಸಾಧ್ಯವೇ ಇಲ್ಲ. ಅಷ್ಟೋಂದು ಸಿರಿವಂತರಾಗಿರೋ ಅಕಿಹಿಟೋಗೆ ಇಬ್ಬರು ಮೊಮ್ಮಕ್ಕಳಿದ್ದಾರೆ. ಅದರಲ್ಲಿ ಒಬ್ಬಳು, ತಾತನ ಶ್ರೀಮಂತಿಕೆಯ ಸಾಮ್ರಾಜ್ಯವೇ ಬೇಡ ಅಂತ ನಿರ್ಧರಿಸಿದ್ದಾಳೆ. ಅರಮನೆಯ ಐಶಾರಾಮಿ ಬದುಕನ್ನೇ ತ್ಯಜಿಸೋದಕ್ಕೆ ಸಿದ್ಧಳಾಗಿದ್ದಾಳೆ. ರಾಜಕುಮಾರಿ ಪಟ್ಟವೇ ಬೇಕಾಗಿಲ್ಲ.. ನಿಮ್ಮ ಅರಮನೆಯೂ ನನಗೆ ಅವಶ್ಯಕತೆ ಇಲ್ಲ ಅಂತ, ಎಲ್ಲವನ್ನೂ ತೊರೆದು ಹೋಗ್ತಿರೋ ಅಕಿಹಿಟೋ ಮೊಮ್ಮಗಳೇ, ಮ್ಯಾಕೋ.

ಅವಳು ಜಪಾನ್ ದೇಶದ ರಾಜಕುಮಾರಿ.. ನೋಡೋದಕ್ಕೆ ಅತಿ ಲೋಕ ಸುಂದರಿ. ಅಂಥಾ ಸುಂದರಿ ಮನಸ್ಸು ಮಾಡಿದ್ರೆ, ರಾಜ ವೈಭೋಗವನ್ನೇ ಆನಂದಿಸ್ತಾ ಇರಬಹುದಿತ್ತು. ಆದರೆ ಒಂದೇ ಒಂದು ಕಾರಣಕ್ಕೆ, ತನ್ನ ಸಾಮ್ರಾಜ್ಯವನ್ನೇ ತ್ಯಜಿಸಿದ್ದಾಳೆ. ಅರಮನೆಯ ಐಶಾರಾಮಿ ಬದುಕನ್ನೇ ತೊರೆದಿದ್ದಾಳೆ. ಯಾಕೆ ಗೊತ್ತಾ?

ಜಪಾನ್​ನಲ್ಲಿ ಪ್ರಜಾಪ್ರಭುತ್ವ ಆಡಳಿತವಿದೆ. ಜಪಾನ್​ ದೇಶದ ಪ್ರಧಾನಿಯಾಗಿ ಶಿನ್​ ಜೋ ಅಬೆ ಅಧಿಕಾರ ನಡೆಸ್ತಿದ್ದಾರೆ. ಆದರೂ ಇಲ್ಲಿ ರಾಜಮನೆತನದ ಒಡೆತನವಿದೆ. ಒಬ್ಬ ಚಕ್ರವರ್ತಿನೂ ಇದ್ದಾನೆ. ಆ ಚಕ್ರವರ್ತಿಯ ಹೆಸರೇ ಅಕಿಹಿಟೋ. 1933ರಲ್ಲಿ ಜನಿಸಿದ ಅಕಿಹಿಟೋ, ಇವತ್ತಿಗೂ ಜಪಾನ್​ ದೇಶವನ್ನ ಆಳ್ತಾ ಇದ್ದಾನೆ. ಈತನ ಮೇಲೆ ಪ್ರಜೆಗಳಿಗೂ ಅಷ್ಟೇ ಪ್ರಮಾಣದ ಪ್ರೀತಿ ವಿಶ್ವಾಸವಿದೆ. ಆತ್ಮೀಯತೆ ಇದೆ.. ಗೌರವವಿದೆ.

ತಾತನ ಮಗಳೆ ರಾಜಕುಮಾರಿ ಪಟ್ಟ ಬೇಡವೆಂದವಳು

ಇಡೀ ಜಪಾನ್ ದೇಶವೇ ಈತನ ಹಿಡಿತದಲ್ಲಿದೆ. ಇವರ ಶ್ರೀಮಂತಿಕೆಯನ್ನು ಅಳೆಯೋದಕ್ಕೆ ಸಾಧ್ಯವೇ ಇಲ್ಲ. ಅಷ್ಟೋಂದು ಸಿರಿವಂತರಾಗಿರೋ ಅಕಿಹಿಟೋಗೆ ಇಬ್ಬರು ಮೊಮ್ಮಕ್ಕಳಿದ್ದಾರೆ. ಅದರಲ್ಲಿ ಒಬ್ಬಳು, ತಾತನ ಶ್ರೀಮಂತಿಕೆಯ ಸಾಮ್ರಾಜ್ಯವೇ ಬೇಡ ಅಂತ ನಿರ್ಧರಿಸಿದ್ದಾಳೆ. ಅರಮನೆಯ ಐಶಾರಾಮಿ ಬದುಕನ್ನೇ ತ್ಯಜಿಸೋದಕ್ಕೆ ಸಿದ್ಧಳಾಗಿದ್ದಾಳೆ. ರಾಜಕುಮಾರಿ ಪಟ್ಟವೇ ಬೇಕಾಗಿಲ್ಲ.. ನಿಮ್ಮ ಅರಮನೆಯೂ ನನಗೆ ಅವಶ್ಯಕತೆ ಇಲ್ಲ ಅಂತ, ಎಲ್ಲವನ್ನೂ ತೊರೆದು ಹೋಗ್ತಿರೋ ಅಕಿಹಿಟೋ ಮೊಮ್ಮಗಳೇ, ಮ್ಯಾಕೋ.

ಸಿರಿತನ ಸಿಕ್ರೆ ಸಾಕು ಅಂತ ಎಲ್ರೂ ಕಾಯ್ತಾ ಇದ್ದಾರೆ. ಆದರೀಕೆ ತನ್ನ ಸಿರಿತನವನ್ನೆಲ್ಲಾ ಬಿಟ್ಟು ಹೊರಟಿದ್ದಾಳೆ. ಅರಮನೆಯ ಬದುಕೇ ಬೇಡ ಅಂತ ನಿರ್ಧರಿಸಿದ್ದಾಳೆ.  ಜಪಾನ್​​ ದೇಶದ ರಾಜಕುಮಾರಿಯಾಗಿ ಶ್ರೀಮಂತಿಕೆಯ ನಡುವೆ ಬದುಕಬೇಕಿದ್ದ ಮ್ಯಾಕೋ, ಎಲ್ಲವನ್ನೂ ಬಿಟ್ಟು ಹೊರ ನಡೆದಿದ್ದಾರೆ.

ಕಾರಣವೇನು ಗೊತ್ತೆ ?

ಅದೊಂದು ದಿನ ಇವರ ಮನೆಯಲ್ಲಿ ನಡೆದ ಒಂದು ಘಟನೆಯಿಂದ. ಆ ಘಟನೆಯ ನಂತರವೇ ಅರಮನೆಯೂ ಬೇಡ. ಸಿರಿವಂತಿಕೆಯ ಸಾಮ್ರಾಜ್ಯವೂ ಬೇಡ ಅಂತ ನಿರ್ಧರಿಸಿದ್ರು ಮ್ಯಾಕೋ. ಅದರಂತೆ ಎಲ್ಲವನ್ನೂ ಬಿಟ್ಟು ಸಾಮಾನ್ಯ ಯುವತಿಯಾಗಿ ಬದುಕೋದಕ್ಕೆ ಸಿದ್ಧವಾಗಿದ್ದಾರೆ. ಸಣ್ಣದೊಂದು ಮನೆಯಲ್ಲಿ ಬದುಕು ದೂಡೋ ಆಲೋಚನೆಯಲ್ಲಿದ್ದಾರೆ.

ಅಷ್ಟಕ್ಕೂ ಆವತ್ತು ಅರಮೆನೆಯಲ್ಲಿ ಅಂಥಾದ್ದೇನ್​ ನಡೀತು? ತಾತನ ಸಂಪತ್ತಿಗೇ ಈಕೆ ಸವಾಲಾಕಿದ್ದು ಯಾಕೆ ಅಂತ ನೀವ್ ಕೇಳಬಹುದು. ಇಲ್ಲೇ ಇರೋದು ಇಂಟರೆಸ್ಟಿಂಗ್​ ಸಮಾಚಾರ. ಅದೊಂದು ದಿನ ಅರಮನೆಯಲ್ಲಿ ಮ್ಯಾಕೋ ಮದುವೆ ವಿಚಾರ ಪ್ರಸ್ತಾಪವಾಯ್ತು. ಆದ್ರೆ ತಾತ ತೋರಿಸಿದ ಯಾರನ್ನೂ ಒಪ್ಪಲಿಲ್ಲ ಮ್ಯಾಕೋ. ನನಗೆ ಇವರಾರೂ ಬೇಕಿಲ್ಲ. ಸಿರಿತನ ಇಲ್ದಿದ್ರೂ ಪರ್ವಾಗಿಲ್ಲ. ಜೀವಕ್ಕಿಂತ ಹೆಚ್ಚು ಪ್ರೀತಿಸೋ ಹುಡುಗ ಬೇಕು ಅಂತ ಹೇಳಿದ್ದಳೀಕೆ. ಅಷ್ಟೇ ಅಲ್ಲ.. ಒಬ್ಬ ಹುಡುಗನ ಫೋಟೋವನ್ನೂ ತೋರಿಸಿದ್ಳು.

ವಿವಿಯಲ್ಲಿ ಶುರುವಾಗಿತ್ತು ಪ್ರೀತಿ

ಈ ಹುಡುಗನ ಹೆಸರು ಕಿ ಕೊಮುರೋ ಅಂತ. ವಯಸ್ಸು 25 ವರ್ಷ. ಈ ರಾಜಕುಮಾರಿ ಮ್ಯಾಕೋಗೂ 25 ವರ್ಷಾನೇ. ಜಪಾನ್​ನ ಟೋಕಿಯೋದಲ್ಲಿರೋ ಇಂಟರ್​ ನ್ಯಾಷಿನಲ್​​ ಕ್ರಿಶ್ಚಿಯನ್ ಯೂನಿವರ್ಸಿಟಿಯಲ್ಲಿ ಇಬ್ಬರೂ ಓದುತ್ತಾ ಇದ್ದರು. 2012ರಲ್ಲಿ ಮೊಟ್ಟ ಮೊದಲ ಬಾರಿಗೆ ಇಬ್ಬರೂ ಒಂದು ರೆಸ್ಟೋರೆಂಟ್​ನಲ್ಲಿ ಭೇಟಿಯಾಗ್ತಾರೆ. ಆಗಲೇ ಇಬ್ಬರ ನಡುವೆ ಲವ್​​ ಶುರುವಾಗಿತ್ತು.

ಈ ಫೋಟೋವನ್ನ ಮನೆಯವರಿಗೆ ತೋರಿಸಿದ ಮ್ಯಾಕೋ, ನಾನು ಇವನನ್ನೇ ಮದುವೆಯಾಗ್ತೀನಿ. ನನಗೆ ಸಿರಿವಂತಿಕೆಯ ಸಾಮ್ರಾಜ್ಯಕ್ಕಿಂತ, ಇವನ ಪ್ರೀತಿಯೇ ಹೆಚ್ಚು ಅಂತ ಕಡ್ಡಿ ತುಂಡು ಮಾಡಿದಂತೆ ಹೇಳಿದಳು. ನೀನು ಈ ಹುಡುಗನನ್ನ ಮದುವೆಯಾದ್ರೆ ಆಸ್ತಿಯಲ್ಲಿ ಬಿಡಿಗಾಸೂ ಸಿಗೋದಿಲ್ಲ ಅಂತ ಹೇಳಿದ್ರು. ಆಗ ತಾತನ ಸಂಪತ್ತಿಗೆ ಸವಾಲ್ ಹಾಕಿ, ಈ ರಾಜಕುಮಾರಿ, ಆಸ್ತಿ ಅಂತಸ್ತು, ಐಶ್ವರ್ಯ ಅರಮನೆಯ ವೈಭೋಗ, ಎಲ್ಲವನ್ನೂ ಬಿಟ್ಟು ಹೊರ ನಡೆದರು. ಅಷ್ಟೇ ಅಲ್ಲ. ತಾನು ಪ್ರೀತಿಸಿದ ಈ ಹುಡುಗನನ್ನ ಮದುವೆಯಾಗೇ ಬಿಟ್ರು.

ಸಣ್ಣ ಮನೆಯಲ್ಲಿ ವಾಸ

ಅರಮನೆಯ ಸಂಬಂಧವನ್ನೇ ಕಳೆದುಕೊಂಡಿದ್ದರೂ ಮ್ಯಾಕೋಗೆ ಬೇಜಾರಿಲ್ಲ. ಯಾಕಂದರೆ, ತಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ಹುಡುಗ ಸಿಕ್ಕಿದ್ದಾನಲ್ಲಾ ಅನ್ನೋ ಖುಷಿಯಲ್ಲಿದ್ದಾಳೆ. ಪ್ರಿಯಕರ, ಸಣ್ಣ ಮನೆ, ಸಾಧಾರಣ ಕೆಲಸ ಇಷ್ಟೆ ಮ್ಯಾಕೋ'ಗೆ ಆಧಾರ.  ಈಕೆಯನ್ನು ಪ್ರೀತಿಗಾಗಿ ಅಷ್ಟೈಶ್ವರ್ಯವನ್ನು ಬಿಟ್ಟು ತ್ಯಾಗಮಯಿ ಅಂದರೆ ತಪ್ಪಾಗಲಾರದು.    

 

ವರದಿ: ಶೇಖರ್ ಪೂಜಾರ್, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!
ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?