ಜನತಾದಳದಿಂದ ಬಂದಿರುವ ಇಬ್ರಾಹಿಂ, ಸಿದ್ದರಾಮಯ್ಯರಿಂದ ಪಕ್ಷ ಬೆಳೆಸಲು ಯಾವ ಕೊಡುಗೆಯೂ ಇಲ್ಲ - ಜನಾರ್ದನ ಪೂಜಾರಿ

By suvarnanews web deskFirst Published Oct 22, 2016, 4:38 AM IST
Highlights

ಇಬ್ರಾಹಿಂ ಮತ್ತು ಸಿದ್ದರಾಮಯ್ಯ ಜನತಾದಳದಿಂದ ಬಂದವರು. ಇವರಿಂದ ಪಕ್ಷ ಬೆಳೆಸಲು ಯಾವ ಕೊಡುಗೆಯೂ ಇಲ್ಲ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನೈತಿಕವಾಗಿ ಸಿಎಂ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಹೇಳಿದರು. ಸಮಾನ ನಾಗರಿಕ ಸಂಹಿತೆ ಮತ್ತು ತಲಾಖೆ ವಿಷಯದಲ್ಲಿ ಮಾತನಾಡಿದ ಅವರು, ಮುಸ್ಲಿಮರ ತಲಾಖ್ ಅವರ ಧರ್ಮಕ್ಕೆ ಬಿಟ್ಟದ್ದು. ಸಮುದಾಯದ ಮಹಿಳೆಯರು ಈ ಬಗ್ಗೆ ಮಾತನಾಡಲಿ. ಮಹಿಳೆಯರೇ ತಮ್ಮ ಗಂಡಂದಿರಿಗೆ ತಲಾಖ್ ನೀಡಲಿ ಎಂದು ಉತ್ತರಿಸಿದರು.

ಮಂಗಳೂರು(ಅ.22): ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಮಾಜಿ ಪ್ರಧಾನಿ ದೇವೇಗೌಡರು ಸಂಚು ರೂಪಿಸುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವೇಗೌಡರ ಆಡಳಿತ ಮಾದರಿ, ಅವರು ಹೃದಯವಂತರು ಎಂದು ಇಬ್ರಾಹಿಂ ಹಾಡಿ ಹೊಗಳಿದ್ದನ್ನ ಉಲ್ಲೇಖಿಸಿದ ಪೂಜಾರಿ, ಸಿ.ಎಂ. ಇಬ್ರಾಹಿಂ ಅವರ ಮಾತುಗಳೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಸಿ ಎಂ ಸಿದ್ದರಾಮಯ್ಯ ಅವರು ಈ ಸಂಚಿಗೆ ಬಲಿ ಬೀಳಬಾರದು, ತಕ್ಷಣ ಇಬ್ರಾಹಿಂ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕು, ಪಕ್ಷದಿಂದಲೂ ಅವರನ್ನು ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ.

click me!