ಐಪಿಎಲ್ ಹರಾಜು : ಯಾವ –ಯಾವ ಆಟಗಾರರ ಬೆಲೆ ಎಷ್ಟೆಷ್ಟು..?

By Suvarna Web DeskFirst Published Jan 12, 2018, 1:23 PM IST
Highlights

ಐಪಿಎಲ್ ಹರಾಜಿಗೆ ಕೇವಲ 2  ವಾರ ಬಾಕಿ ಇದ್ದು, ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರು ತಮ್ಮ ಮೂಲಬೆಲೆ ಘೋಷಿಸಲು ಆರಂಭಿಸಿದ್ದಾರೆ. ರಾಷ್ಟ್ರೀಯ ತಂಡದ ಪರ ಆಡಿದ ಆಟಗಾರರಿಗೆ 50 ಲಕ್ಷ, 1 ಕೋಟಿ, 1.50 ಕೋಟಿ ಹಾಗೂ 2 ಕೋಟಿ ಮೂಲ ಬೆಲೆ ನಿಗದಿ ಪಡಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡಿದೆ.

ಮುಂಬೈ(ಜ.12): ಐಪಿಎಲ್ ಹರಾಜಿಗೆ ಕೇವಲ 2  ವಾರ ಬಾಕಿ ಇದ್ದು, ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರು ತಮ್ಮ ಮೂಲಬೆಲೆ ಘೋಷಿಸಲು ಆರಂಭಿಸಿದ್ದಾರೆ. ರಾಷ್ಟ್ರೀಯ ತಂಡದ ಪರ ಆಡಿದ ಆಟಗಾರರಿಗೆ 50 ಲಕ್ಷ, 1 ಕೋಟಿ, 1.50 ಕೋಟಿ ಹಾಗೂ 2 ಕೋಟಿ ಮೂಲ ಬೆಲೆ ನಿಗದಿ ಪಡಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡಿದೆ.

ಹಿರಿಯ ಆಟಗಾರರಾದ ಗೌತಮ್ ಗಂಭೀರ್ ಹಾಗೂ ಹರ್ಭಜನ್ ಸಿಂಗ್ ತಮ್ಮ ಮೂಲಬೆಲೆಯನ್ನು 2 ಕೋಟಿಗೆ ನಿಗದಿ ಪಡಿಸಿಕೊಂಡಿದ್ದಾರೆ. 2008ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿದ್ದ ಹರ್ಭಜನ್, 10 ವರ್ಷಗಳ ಕಾಲ ಅದೇ ತಂಡದ ಪರ ಆಡಿದ್ದರು.

10 ವರ್ಷಗಳ ಬಳಿಕ ಮೊದಲ ಬಾರಿಗೆ ಅವರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ‘10 ವರ್ಷಗಳಿಂದ ಮುಂಬೈ ಪರ ಆಡಿದ್ದೇನೆ. ತಂಡದ ಯಶಸ್ಸಿನಲ್ಲಿ ನನ್ನ ಪಾತ್ರವೂ ಇದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ಈ ಬಾರಿ ಯಾವುದೇ ತಂಡಕ್ಕೆ ಸೇರ್ಪಡೆಗೊಂಡರೂ, ಅಗತ್ಯ ರೀತಿಯಲ್ಲಿ ತಂಡಕ್ಕೆ ನೆರವಾಗಲಿದ್ದೇನೆ’ ಎಂದು ಹರ್ಭಜನ್ ಸಿಂಗ್ ಹೇಳಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಮಿಂಚಿರುವ ಅಗ್ರ ಆಟಗಾರರಾದ ಯುವ ರಾಜ್ ಸಿಂಗ್, ಕ್ರಿಸ್ ಗೇಲ್, ಡ್ವೇನ್ ಬ್ರಾವೋ, ಕೀರನ್ ಪೊಲಾರ್ಡ್, ಬ್ರೆಂಡನ್ ಮೆಕ್ಕಲಂ, ಯುವ ಸ್ಪಿನ್ನರ್ ಯಜುವೇಂದ್ರ ಚಹಲ್ ಸೇರಿದಂತೆ ಇನ್ನೂ ಅನೇಕರು ತಮ್ಮ ಮೂಲ ಬೆಲೆಯನ್ನು 2 ಕೋಟಿಗೆ ನಿಗದಿ ಪಡಿಸಿಕೊಳ್ಳುವ ನಿರೀಕ್ಷೆ ಇದೆ.

ಇದೇ ವೇಳೆ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಅಮಾನ ತ್ತಿನಲ್ಲಿರುವ ಯೂಸುಫ್ ಪಠಾಣ್ ತಮ್ಮ ಮೂಲ ಬೆಲೆ 75 ಲಕ್ಷ ಎಂದು ಘೋಷಿಸಿದರೆ, ಕಳೆದ ಬಾರಿ ಹರಾಜಾಗದೆ ಉಳಿದಿದ್ದ ಇರ್ಫಾನ್ ಪಠಾಣ್ 50 ಲಕ್ಷ ಮೂಲ ಬೆಲೆ ಹೊಂದಿದ್ದಾರೆ. ಜ.27, 28 ರಂದು ಹರಾಜು ನಡೆಯಲಿದೆ.

click me!