4 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲು ಅನುಭವಿಸಿ ಹೊರ ಬಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಕೆಂಡಾಮಂಡಲವಾಗಿದ್ದು, ಸಿಎಂ ಕುಮಾರಸ್ವಾಮಿ ವಿರುದ್ಧ ಕೆಂಡಕಾರಿದ್ದಾರೆ. ಅವರ ಆಕ್ರೊಶ ಭರಿತ ಮಾತುಗಳು ಹೇಗಿದ್ದವು ನೋಡಿ.
ಬೆಂಗಳೂರು, [ನ.14] ಅಂಬಿಡೆಂಟ್ ಅವ್ಯವಹಾರ ಪ್ರಕರಣದ ಡೀಲ್ ಆರೋಪದಡಿ ಬಂಧನವಾಗಿದ್ದ ಜನಾರ್ದನ ರೆಡ್ಡಿ ಜಾಮೀನಿನ ಮೇಲೆ ಇಮದು [ಬುಧವಾರ] ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಸಿಎಂ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
undefined
ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಜನಾರ್ದನ ರೆಡ್ಡಿ ರೌದ್ರಾವತಾರ..!
4 ದಿನ ಜೈಲುವಾಸ ಮುಗಿಸಿ ಹೊರಬಂದ ಬಳಿಕ ಮಾಧ್ಯಗಳಿಗೆ ಪ್ರತಿಕ್ರಿಯಿಸಿದ ರೆಡ್ಡಿ, 12 ವರ್ಷದ ಸೇಡನ್ನು ಕುಮಾರಸ್ವಾಮಿ ತೀರಿಸಿಕೊಂಡಿದ್ದು, ಅಧಿಕಾರಿಗಳನ್ನು ಜಡ್ಜ್ ಮುಂದೆ ತಲೆತಗ್ಗಿಸುವಂತೆ ಮಾಡಿದ್ದು ಎಚ್ಡಿಕೆ ಎಂದು ಸಿಎಂ ಕುಮಾರಸ್ವಾಮಿ ಮೇಲೆ ರೆಡ್ಡಿ ನೇರ ವಾಗ್ದಾಳಿ ಮಾಡಿದ್ದಾರೆ.
ನನ್ನನ್ನು ಫಾಲೋ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಾನೇನು ದೇಶ ಬಿಟ್ಟು ಓಡಿ ಹೋಗುತ್ತಿದ್ದೆನಾ..? ಬಳ್ಳಾರಿ ಬಳಿಕ ಬೆಂಗಳೂರಿನಿಂದ ಓಡಿಸುವ ಯತ್ನ ನಡೆಸಿದ್ದು, ನನ್ನನ್ನು ಬೆಂಗಳೂರಿನಿಂದ ಓಡಿಸುವ ನಿಮ್ಮ ಆಸೆ ಈಡೇರುವುದಿಲ್ಲ. ಎಂತಹ ಆತಂಕ ಒಡ್ಡಿದರೂ ಬೆಂಗಳೂರು ಬಿಟ್ಟು ಹೋಗುವುದಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದರು.
ರಾಜ್ಯದಲ್ಲಿನ ಎಲ್ಲಾ ಧೈರ್ಯಶಾಲಿಗಳನ್ನು ಹತ್ತಿಕ್ಕಲು ನೋಡುತ್ತಿದ್ದಾರೆ. ರಾಜ್ಯ ಸರ್ಕಾರ ಕೊಡುವ ಭದ್ರತೆಯನ್ನು ನಾನು ನಂಬುವುದಿಲ್ಲ ದೇವರು ಕೊಟ್ಟ ಅಧಿಕಾರವನ್ನು ನೀವು ಚಲಾಯಿಸಿ. ಆದರೆ ನನ್ನ ಸುದ್ದಿಗೆ ಯಾಕೆ ನೀವು ಬರುತ್ತೀರಿ..? ನನ್ನನ್ನು ಕಾಪಾಡಲು ದೇವರು ಬಿಟ್ಟರೆ ಯಾರೂ ಇಲ್ಲ ಗರಂ ಆಗಿಯೇ ವಾಗ್ದಾಳಿ ನಡೆಸಿದರು.