
ಬೆಂಗಳೂರು, [ನ.14] ಮಾಜಿ ಸಚಿವ ಜನಾರ್ದನ ರೆಡ್ಡಿ ಇಂದು [ಬುಧವಾರ] ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ಸಿಎಂ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಾನು ಸುಮ್ಮನೆ ಕೂತ್ರೂ ನನ್ನನ್ನ ಬಿಡ್ತಿಲ್ಲ. ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಕ್ಕೆ ಅವರಿಗೆ ದೇವರು ಶಿಕ್ಷೆ ಕೊಡ್ತಾನೆ. ಕುಮಾರಸ್ವಾಮಿ ರಾಕ್ಷಸ ಆನಂದ ಅನುಭವಿಸುತ್ತಿದ್ದಾರೆ. ಅಲೋಕ್ ಕುಮಾರ್, ಗಿರೀಶ್ ನಮಗೆ ಅಗತ್ಯವಿಲ್ಲ. ಅವರು ಕುಮಾರಸ್ವಾಮಿ ಹೇಳಿದಂತೆ ಮಾಡ್ತಾರೆ ಎಂದು ಹೆಚ್ಡಿಕೆ ವಿರುದ್ಧ ಹರಿಹಾಯ್ದರು.
12 ವರ್ಷದ ಸೇಡು ತೀರಿಸಿಕೊಂಡ್ರು ಕುಮಾರಸ್ವಾಮಿ: ಜೈಲಿನಿಂದ ಹೊರಬಂದ ರೆಡ್ಡಿ ಕಿಡಿ
ನನ್ನನ್ನ ಬೆಂಗಳೂರಿನಿಂದ ಓಡಿಸ್ಬೇಕು ಅಂಥ ಪ್ಲಾನ್ ಮಾಡಿದ್ರು. ಸಿಸಿಬಿ ನನ್ನ ತನಿಖೆ ನಡೆಸುವಾಗ ಅವರಿಗೆ ಸಾಕಷ್ಟು ಒತ್ತಡ ಇತ್ತು. ಪದೇ ಪದೇ ಅವರಿಗೆ ಫೋನ್ ಬರುತ್ತಾ ಇತ್ತು. ನನ್ನನ್ನ ಒಂದು ದಿನಾವಾದ್ರೂ ಜೈಲಿಗೆ ಕಳಿಸ್ಬೇಕು ಅಂಥ ಪ್ಲಾನ್ ಮಾಡಿದ್ರು. ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.
ನನ್ನ ಜೀವಕ್ಕೆ ಅಪಾಯವಿದೆ. ನಾನು ಸ್ವತಃ ಕುಮಾರಸ್ವಾಮಿಗೆ ಹೇಳಿದ್ದೆ. ಆದ್ರೆ ಇದುವರೆಗೂ ಯಾವುದೇ ಭದ್ರತೆ ಒದಗಿಸಿಲ್ಲ. ನನ್ನ ಜೀವಕ್ಕೆ ಅಪಾಯ ಆದ್ರೆ ಯಾರೂ ಹೊಣೆ? ನನ್ನ ಕುಟುಂಬದ ಜೊತೆ ನೆಮ್ಮದಿಯಾಗಿ ಬದುಕೋಕೆ ಬಿಡ್ತಿಲ್ಲ.
ಪದೇ ಪದೇ ನನ್ನ ಮೇಲೆ ಸುಳ್ಳು ಕೇಸ್ ಹಾಕ್ತಿದ್ದಾರೆ. ಈ ರಾಜ್ಯದಲ್ಲಿ ನನ್ನ ಪತ್ರಕ್ಕೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ನಾನು ಎಲ್ಲೂ ನಾಪತ್ತೆಯಾಗಿರಲಿಲ್ಲ . ಸಿಸಿಬಿ ನೋಟಿಸ್ ನೀಡಿದ ಮೇಲೆ ಹಾಜರಾಗೋಣ ಅನ್ಕೊಂಡಿದ್ದೆ. ನಾನು ಮೊಳಕಾಲ್ಮೂರಿನಲ್ಲೇ ಇದ್ದೆ, ಆಮೇಲೆ ಬೆಂಗಳೂರು ಬಂದಿದ್ದೆ.
ಸಿಸಿಬಿ ಆಫೀಸರುಗಳು ನನ್ನನ್ನು ತುಂಬಾ ಹೀನಾಯವಾಗಿ ನಡ್ಕೊಂಡ್ರು. ನನಗೆ ಈ ಮುಂಚೆನೇ ಆಫೀಸರ್ ಒಬ್ಬ ಹೇಳಿದ್ರು ಸೇಫ್ ಆಗಿರಿ ಅಂಥಾ. ಆದ್ರೆ ನಾನು ಏನೂ ತಪ್ಪು ಮಾಡಿಲ್ಲ, ಹಾಗಾಗಿ ಎಲ್ಲೂ ಹೋಗಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.