
ಬೆಂಗಳೂರು : ಜಮ್ಮು ಕಾಶ್ಮೀರಕ್ಕೆ ಹಿಂದೂ ಮುಖ್ಯಮಂತ್ರಿ ನೇಮಕವಾಗಲು ಇದು ಸೂಕ್ತವಾದ ಸಮಯ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಇದೇ ವೇಳೆ ನೆಹರು ಅವರನ್ನು ಟೀಕಿಸಿದ ಸುಬ್ರಮಣ್ಯಂ ಸ್ವಾಮಿ ಕಾಶ್ಮೀರಕ್ಕೆ ಮುಸಲ್ಮಾನ ಮುಖ್ಯಮಂತ್ರಿ ನೇಮಕ ಮಾಡುವುದು ಜವಾಹರ್ ಲಾಲ್ ನೆಹರು ಸಂಸ್ಕೃತಿಯಾಗಿದ್ದು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈಗ ಅಲ್ಲಿಗೆ ಹಿಂದೂ ಮುಖ್ಯಮಂತ್ರಿಯೋರ್ವರ ನೇಮಕವಾಗಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಕಾಶ್ಮೀರದಲ್ಲಿ ಹಿಂದೂ ಮುಖ್ಯಮಂತ್ರಿಯೇ ಆಗಬೇಕಾಗಿದ್ದು, ಪಿಡಿಪಿಯಲ್ಲಿ ಹಿಂದೂ ಅಥವಾ ಸಿಖ್ ವ್ಯಕ್ತಿಯಿದ್ದರೆ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿ ಎಂದು ಹೇಳಿದ್ದಾರೆ. ಇನ್ನು ನೆಹರು ಅವರು ಸಂಪ್ರದಾಯವೊಂದನ್ನು ನಡೆಸಿಕೊಂಡು ಬಂದಿದ್ದು, ಜಮ್ಮು ಕಾಶ್ಮೀರದಲ್ಲಿ ಕೇವಲ ಮುಸ್ಲಿಂ ವ್ಯಕ್ತಿಯೇ ಮುಖ್ಯಮಂತ್ರಿಯಾಗುತ್ತಿದ್ದಾರೆ.
1965ರಿಂದ ಜಮ್ಮು ಕಾಶ್ಮೀರವು ಒಟ್ಟು 9 ಮಂದಿ ಮುಖ್ಯಮಂತ್ರಿಗಳನ್ನು ಕಂಡಿದೆ. ಈ ವೇಳೆಯಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಆದ್ದರಿಂದ ಈಗ ಇಲ್ಲಿಗೆ ಹಿಂದೂ ಮುಖ್ಯಸ್ಥ ನೇಮಕ ಅಗತ್ಯವಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.