ಕಚೇರಿಗೆ ಬಂದರೂ ಕುರ್ಚಿ ಮೇಲೆ ಕೂರುವುದಿಲ್ಲವಂತೆ ಪಿಯೂಶ್ ಗೋಯಲ್!

First Published Jun 12, 2018, 5:36 PM IST
Highlights

ಕಿಡ್ನಿ ಕಸಿ ಮಾಡಿಸಿಕೊಂಡಿರುವ ಅರುಣ್ ಜೇಟ್ಲಿ ಆಸ್ಪತ್ರೆಯಿಂದ ಮನೆಗೆ ವಾಪಸ್ ಆಗಿದ್ದು, ಸೋಂಕು ತಗಲುವ ಭೀತಿಯಿಂದ ವೈದ್ಯರು ಯಾರನ್ನು ಕೂಡ ಭೇಟಿಯಾಗಲು ಬಿಡುತ್ತಿಲ್ಲ. ಜೇಟ್ಲಿ ಆಸ್ಪತ್ರೆ ಸೇರಿದ್ದರಿಂದ ಹಣಕಾಸು ಇಲಾಖೆ ಪ್ರಭಾರವನ್ನು ತಾತ್ಕಾಲಿಕವಾಗಿ ನೋಡಿಕೊಳ್ಳುತ್ತಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೌತ್  ಬ್ಲಾಕ್‌ನ ಹಣಕಾಸು ಮಂತ್ರಿಯ ಕಚೇರಿಗೆ ಬರುತ್ತಾರಾದರೂ ಕೂಡ ಮಿನಿಸ್ಟರ್ ಕುರ್ಚಿ ಮೇಲೆ ಕೂರದೆ ಪಕ್ಕದಲ್ಲಿರುವ ಸೋಫಾ ಮೇಲೆ ಕುಳಿತು ಸಭೆ ನಡೆಸುತ್ತಾರೆ.

ಬೆಂಗಳೂರು (ಜೂ. 12): ಕಿಡ್ನಿ ಕಸಿ ಮಾಡಿಸಿಕೊಂಡಿರುವ ಅರುಣ್ ಜೇಟ್ಲಿ ಆಸ್ಪತ್ರೆಯಿಂದ ಮನೆಗೆ ವಾಪಸ್ ಆಗಿದ್ದು, ಸೋಂಕು ತಗಲುವ ಭೀತಿಯಿಂದ ವೈದ್ಯರು ಯಾರನ್ನು ಕೂಡ ಭೇಟಿಯಾಗಲು ಬಿಡುತ್ತಿಲ್ಲ.

ಜೇಟ್ಲಿ ಆಸ್ಪತ್ರೆ ಸೇರಿದ್ದರಿಂದ ಹಣಕಾಸು ಇಲಾಖೆ ಪ್ರಭಾರವನ್ನು ತಾತ್ಕಾಲಿಕವಾಗಿ ನೋಡಿಕೊಳ್ಳುತ್ತಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೌತ್  ಬ್ಲಾಕ್‌ನ ಹಣಕಾಸು ಮಂತ್ರಿಯ ಕಚೇರಿಗೆ ಬರುತ್ತಾರಾದರೂ ಕೂಡ ಮಿನಿಸ್ಟರ್ ಕುರ್ಚಿ ಮೇಲೆ ಕೂರದೆ ಪಕ್ಕದಲ್ಲಿರುವ ಸೋಫಾ ಮೇಲೆ ಕುಳಿತು ಸಭೆ ನಡೆಸುತ್ತಾರೆ.

ಜೇಟ್ಲಿಯವರ ಅಧಿಕಾರಿಗಳನ್ನು ಕೂಡ ಬದಲಿಸುವ ಗೊಡವೆಗೆ ಹೋಗದ ಪಿಯೂಷ್, ಏನೇ ನಿರ್ಣಯ ತೆಗೆದುಕೊಳ್ಳಬೇಕಾದರೂ ಕೂಡ ಜೇಟ್ಲಿ ಜತೆ ಫೋನ್‌ನಲ್ಲಿ ಮಾತನಾಡಿಯೇ ಮುಂದೆ ಹೆಜ್ಜೆ ಇಡುತ್ತಾರೆ. ಅಂದ ಹಾಗೆ ಅರುಣ್ ಜೇಟ್ಲಿ ಮಾನ್ಸೂನ್ ಅಧಿವೇಶನದಿಂದ ಕೆಲಸಕ್ಕೆ ಹಾಜರಾಗುತ್ತಾರಂತೆ.
 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

click me!