ಜೇಠ್ಮಲಾನಿ ಬಡವರಿಂದ ಹಣ ತೆಗೆದುಕೊಳ್ಳುವುದಿಲ್ಲವಂತೆ!

By Suvarna Web DeskFirst Published Apr 4, 2017, 12:45 PM IST
Highlights

ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಎದುರಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಪರ ವಾದ ಮಾಡುತ್ತಿರುವ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಹಣ ತೆಗೆದುಕೊಳ್ಳದೇ ಉಚಿತವಾಗಿ ಕೋರ್ಟ್ ನಲ್ಲಿ ವಾದ ಮಾಡಲಿದ್ದಾರಂತೆ! ಹಾಗಂತ ಸ್ವತ: ಅವರೇ ಹೇಳಿಕೊಂಡಿದ್ದಾರೆ.

ನವದೆಹಲಿ (ಏ.04): ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಎದುರಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಪರ ವಾದ ಮಾಡುತ್ತಿರುವ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಹಣ ತೆಗೆದುಕೊಳ್ಳದೇ ಉಚಿತವಾಗಿ ಕೋರ್ಟ್ ನಲ್ಲಿ ವಾದ ಮಾಡಲಿದ್ದಾರಂತೆ! ಹಾಗಂತ ಸ್ವತ: ಅವರೇ ಹೇಳಿಕೊಂಡಿದ್ದಾರೆ.
ನಾನು ಶ್ರೀಮಂತರಿಂದ ಮಾತ್ರ ಹಣ ತೆಗೆದುಕೊಳ್ಳುತ್ತೇನೆ. ಬಡವರಿಂದ ಹಣ ತೆಗೆದುಕೊಳ್ಳುವುದಿಲ್ಲ. ಉಚಿತವಾಗಿ ವಾದ ಮಾಡುತ್ತೇನೆ. ಒಂದು ವೇಳೆ ಸರ್ಕಾರ ಅಥವಾ ಕೇಜ್ರಿವಾಲ್ ಗೆ ಹಣ ಪಾವತಿಸಲು ಆಗದೇ ಇದ್ದರೆ ನಾನು ಫ್ರೀ ಆಗಿ ವಾದ  ಮಾಡುತ್ತೇನೆ. ನನ್ನ ಬಡ ಕಕ್ಷಿದಾರರಲ್ಲಿ ಇವರು ಒಬ್ಬರು ಅಂದುಕೊಳ್ಳುತ್ತೇನೆ ಎಂದು ಜೇಠ್ಮಲಾನಿ ಹೇಳಿದ್ದಾರೆ.

ಜೇಠ್ಮಲಾನಿ ಕಚೇರಿಯಿಂದ ಮುಂಚಿತವಾಗಿ 1 ಕೋಟಿ ರೂ ಹಾಗೂ ಪ್ರತಿ ವಿಚಾರಣೆಗೂ 22 ಲಕ್ಷ ರೂ ಅನ್ನು ಕೇಜ್ರಿವಾಲ್ ನೀಡಬೇಕೆಂದು ಬೇಡಿಕೆಯಿಡಲಾಗಿತ್ತು ಎನ್ನಲಾಗಿದೆ. ಅದರಂತೆ ಜೇಠ್ಮಲಾನಿ 11 ಬಾರಿ ವಿಚಾರಣೆಗೆ ಹಾಜರಾಗಿದ್ದು 3.24 ಕೋಟಿ ರೂಗಳನ್ನು ಕೇಜ್ರಿ ಕೊಡುವುದು ಬಾಕಿಯಿದೆ. ಅದಿನ್ನೂ ಪಾವತಿಯಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

click me!