
ನವದೆಹಲಿ: ಭಾರತದ ಮೇಲೆ ಒಂದಿಲ್ಲೊಂದು ಹೊಸ ಮಾದರಿಯಲ್ಲಿ ದಾಳಿ ಮಾಡಲು ಹೊಂಚು ಹಾಕುವ ಪಾಕಿಸ್ತಾನಿ ಉಗ್ರರು ಈಗ ದಾಳಿಗೆ ಹೊಸದೊಂದು ಮಾರ್ಗವನ್ನು ಕಂಡುಕೊಂದಿದ್ದಾರೆ. ಪಾಕಿಸ್ತಾನ ಬೆಂಬ ಲಿತ ಜೈಷ್-ಎ- ಮೊಹಮ್ಮದ್ ಭಯೋತ್ಪಾದಕ ಸಂಘ ಟನೆ ಸಮುದ್ರ ಡೈವರ್‌ಗಳನ್ನು ಬಳಸಿ ಭಾರತೀಯ ನೌಕಾ ಪಡೆಯ ಯುದ್ಧ ನೌಕೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದ್ದು, ಹೈ ಅಲರ್ಟ್ ಘೋಷಿ ಸಲಾಗಿದೆ.
ಆಳ ಸಮುದ್ರ ಕಾರ್ಯಾಚರಣೆ ನಡೆಸುವ ಕುರಿತು ಜೈಷ್ ಉಗ್ರರಿಗೆ ಪಾಕಿಸ್ತಾನದ ಬಹಾವಲ್ಪುರದಲ್ಲಿ ತರಬೇತಿಯನ್ನು ನೀಡಲಾಗುತ್ತಿದ್ದು, ಯುದ್ಧನೌಕೆ ಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಿರುವ ಶಂಕೆ ವ್ಯಕ್ತವಾ ಗಿದೆ. ವಿಶಾಖಪಟ್ಟಣಂ ಸಾಗರ ತೀರದಲ್ಲಿರುವ ಐಎನ್ ಎಸ್ ಅರಿಹಂತ್, ಐಎನ್‌ಎಸ್ ಅರಿಘಾಟ್ ಹಾಗೂ ಐಎನ್‌ಎಸ್ ಚಕ್ರ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳನ್ನು ಗುರಿಯಾಗಿಸಿ ದಾಳಿ ನಡೆಯುವ ಸಂಭವ ಇದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನೌಕಾ ನೆಲೆಗಳು ಹಾಗೂ ಬಂದರು ಗಳಿಗೆ ಬಹುಸ್ತರದ ಭದ್ರತೆ ಒದಗಿಸಲಾ ಗಿದ್ದು, ಸಮುದ್ರ ಡೈವರ್‌ಗಳನ್ನು ಗುರುತಿ ಸುವ ಚಾಕಚಕ್ಯತೆ ಹೊಂದಿರುವ ಸೋನಾರ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ ಎಂದು ಎನ್‌ಡಿಟೀವಿ ವರದಿ ಮಾಡಿದೆ.
ಆದರೆ ಬಂದರಿನಂತಹ ಇಕ್ಕಟ್ಟಿನ ಸ್ಥಳದಲ್ಲಿ ಸಮುದ್ರದ ಕೆಳಗಿನಿಂದ ನಡೆಯುವ ದಾಳಿಯನ್ನು ತಾಳಿಕೊಳ್ಳುವುದು ಸಮರನೌಕೆಗಳಂತಹ ದೈತ್ಯಾಹಡಗಿಗೆ ಕಷ್ಟಸಾಧ್ಯ ಎಂದು ತಜ್ಞರು ಹೇಳುತ್ತಾರೆ. 2000ನೇ ಇಸವಿಯಲ್ಲಿ ಅಮೆರಿಕದ 17 ನೌಕಾಪಡೆ ಯೋಧರು ಅಲ್ ಖೈದಾ ದಾಳಿಯಲ್ಲಿ ಮೃತರಾಗಿದ್ದರು. ದೋಣಿಯಲ್ಲಿ ಬಾಂಬ್ ತಂದು ಯೆಮೆನ್ ಬಳಿಯ ಏಡನ್‌ನಲ್ಲಿ ಉಗ್ರರು ಈ ದಾಳಿ ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.