ಶೀಘ್ರ 100ರ ಹೊಸ ನೋಟು : ರದ್ದಾಗುತ್ತಾ ಹಳೆ ನೋಟು..?

By Web DeskFirst Published Jul 19, 2018, 8:27 AM IST
Highlights

ಈಗಾಗಲೇ 500, 200, 50 ಮತ್ತು 10 ರು. ಮುಖಬೆಲೆಯ ಹೊಸ ನೋಟುಗಳು ಚಾಲ್ತಿಯಲ್ಲಿವೆ. ಇದರ ಜೊತೆಗೆ ಶೀಘ್ರದಲ್ಲೇ 100 ರು. ಮುಖಬೆಲೆಯ ನೇರಳೆ ಬಣ್ಣದ ಹೊಸ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ನವದೆಹಲಿ: ಈಗಾಗಲೇ 500, 200, 50 ಮತ್ತು 10 ರು. ಮುಖಬೆಲೆಯ ಹೊಸ ನೋಟುಗಳು ಚಾಲ್ತಿಯಲ್ಲಿವೆ. ಇದರ ಜೊತೆಗೆ ಶೀಘ್ರದಲ್ಲೇ 100 ರು. ಮುಖಬೆಲೆಯ ನೇರಳೆ ಬಣ್ಣದ ಹೊಸ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಮಧ್ಯಪ್ರದೇಶದ ದೇವಾಸ್‌ನಲ್ಲಿರುವ ಬ್ಯಾಂಕ್ ನೋಟ್ ಪ್ರೆಸ್‌ನಲ್ಲಿ ಹೊಸ ಮಾದರಿಯ 100 ರು. ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗುತ್ತಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ನೂತನ ಮಾದರಿಯ ನೋಟುಗಳನ್ನು ಸಾರ್ವಜನಿ ಕರಿಗೆ ಮುಕ್ತಗೊಳಿಸಲಾಗುತ್ತದೆ ಎಂದು ದೈನಿಕ ಭಾಸ್ಕರ್ ಪತ್ರಿಕೆ ವರದಿ ಮಾಡಿದೆ. ಆದಾಗ್ಯೂ, ನೂತನ ಮಾದರಿಯ ೧೦೦ ರು. ನೋಟಿನಿಂದ ಈಗಿರುವ ಹಳೆಯ 100 ರು. ನೋಟಿನ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.

ಈ ನೂತನ ನೋಟು ಗುಜರಾತ್‌ನಲ್ಲಿರುವ ಐತಿಹಾಸಿಕ ಮತ್ತು ರಾಣಿ ಕಿ ವಾವ್ ಎಂಬ ಬಾವಿಯ ಮೆಟ್ಟಿಲುಗಳು ಮತ್ತು ಮೈಕ್ರೋ ಸೆಕ್ಯೂರಿಟಿ ಲಕ್ಷಣಗಳನ್ನು ಒಳಗೊಂಡಿರ ಲಿದೆ. ಹೊಸ ನೋಟು ಈಗಿನ 100 ರು. ನೋಟಿಗಿಂತ ಸಣ್ಣದು ಮತ್ತು 10 ರು.ನೋಟಿಗಿಂತ ಸ್ವಲ್ಪ ದೊಡ್ಡದಾಗಿ ರಲಿದ್ದು, ಈ ನೂತನ ನೋಟುಗಳಿಗಾಗಿ ಮತ್ತೆ ಎಟಿಎಂ ಗಳನ್ನು ರೀ ಕ್ಯಾಲಿಬರ್ ಮಾಡುವ ಅಗತ್ಯ ಏರ್ಪಡುತ್ತದೆ ಎಂದು ವರದಿ ಹೇಳಿದೆ. ಭಯೋ ತ್ಪಾದನೆ, ಉಗ್ರರಿಗೆ ಹಣ ಪೂರೈಕೆ ಮತ್ತು ಕಪ್ಪು ಹಣ ನಿಗ್ರಹಕ್ಕಾಗಿ 2016 ರ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಳೆಯ 500 ಮತ್ತು 1000 ರು. ನೋಟುಗಳನ್ನು ಅಮಾನ್ಯೀಕರಣಗೊಳಿಸಿತ್ತು. ಬಳಿಕ ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು.

click me!