
ಹುಬ್ಬಳ್ಳಿ (ಡಿ.20): ಇಂದು ನಡೆಯುವ ಪರಿವರ್ತನಾ ಯಾತ್ರೆ ಒಂದು ಇತಿಹಾಸ ನಿರ್ಮಾಣ ಮಾಡಲಿದೆ. ಬಿಜೆಪಿಯ ಪರಿವರ್ತನಾ ಯಾತ್ರೆ ನೋಡಿ, ಮುಖ್ಯಮಂತ್ರಿಗಳು ಗಾಬರಿಯಾಗಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮುಖ್ಯಮಂತ್ರಿಗಳ ನವಕರ್ನಾಟಕ ನಿರ್ಮಾಣ ಯಾತ್ರೆ ಬಗ್ಯೆ ವ್ಯಂಗ್ಯವಾಡುತ್ತಾ, ಈಗ ನವಕರ್ನಾಟಕ ನಿರ್ಮಾಣ ಮಾಡುವವರು ಇಷ್ಟು ದಿನ ಏನ್ ಮಾಡಿದ್ರು? ಇದುವರೆಗೆ ನಿದ್ದೆ ಮಾಡಿ, ಚುನಾವಣೆ ಬಂದಾಗ ನವಕರ್ನಾಟಕ ನಿರ್ಮಾಣ ಮಾಡ್ತೀವಿ ಅಂತಿದ್ದಾರೆ. ಇದು ಅತ್ಯಂತ ಭ್ರಷ್ಟ ,ಜನ ವಿರೋಧಿ, ರೈತ ವಿರೋಧಿ ಸರ್ಕಾರ. ಸಿದ್ದರಾಮಯ್ಯ-ಪರಮೇಶ್ವರ ಉತ್ತರ- ದಕ್ಷಿಣ ಇದ್ದಂಗೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಸೋತಲ್ಲಿ ಪರಮೇಶ್ವರ, ಕಾಂಗ್ರೆಸ್ ಗೆದ್ದ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಯಾತ್ರೆ ಮಾಡುತ್ತಿದ್ದಾರೆ. ಯೋಗಿಶ್ ಗೌಡ ಕೊಲೆ ಪ್ರಕಣವನ್ನ, ನಿಜವಾದ ಆರೋಪಿಗಳನ್ನ ರಕ್ಷಿಸುತ್ತಿದ್ದಾರೆ. ನಾಲ್ಕು ಜನರನ್ನ ಕಾಟಾಚಾರಕ್ಕೆ ಬಂಧಿಸಿ ಮರೆ ಮಾಚಲಾಗುತ್ತಿದೆ. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಕೊಲೆ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ಬಿಜೆಪಿಯ ಜಿಲ್ಲಾ ಪಂಚಾಯತ ಸದಸ್ಯ ನನ್ನ ಬೀಕರವಾಗಿ ಹತ್ಯೆ ಮಾಡಿದ್ರು. ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಏನು ಕೊಟ್ಟಿದ್ದಾರೆ? ಅಭಿವೃದ್ಧಿ ಏನು ಕೊಟ್ಟಿದ್ದೀರಿ? ಬಹಿರಂಗಪಡಿಸಿ ಹುಬ್ಬಳ್ಳಿಗೆ ಬನ್ನಿ. ಯಾವ ಪುರುಷಾರ್ಥಕ್ಕೆ ಹುಬ್ಬಳ್ಳಿಗೆ ಬರುತ್ತಿದ್ದೀರಿ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜಗದೀಶ್ ಶೆಟ್ಟರ್ ಸವಾಲು ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.