
ವಾಷಿಂಗ್ಟನ್: ಅಕ್ರಮವಾಗಿ ಅಮೆರಿಕದೊಳಕ್ಕೆ ಪ್ರವೇಶಿಸುವ ಕುಟುಂಬಗಳಿಂದ ಅವರ ಮಕ್ಕಳನ್ನು ಬೇರ್ಪಡಿಸುವ ಟ್ರಂಪ್ ವಲಸೆ ನೀತಿಯಿಂದ ಹಲವರು ಸಮಸ್ಯೆಗೆ ಸಿಲುಕಿದ ಬೆನ್ನಲ್ಲೇ, ಇಂಥ ಅಮಾನವೀಯ ವಲಸೆ ನೀತಿಯನ್ನು ಕೊನೆಗೊಳಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅವರ ಪುತ್ರಿ ಮತ್ತು ಸರ್ಕಾರದ ಸಲಹೆಗಾರ್ತಿಯೂ ಆದ ಇವಾಂಕಾ ಟ್ರಂಪ್ ಅವರು ಒತ್ತಾಯಿಸಿದ್ದಾರೆ.
ಅಮೆರಿಕಕ್ಕೆ ಬರುವ ವಲಸಿಗರನ್ನು ಗುರುತಿಸಿ ಅವರ ಮಕ್ಕಳನ್ನು ಪ್ರತ್ಯೇಕಿಸುವ ವಿಡಿಯೋ ಮತ್ತು ಫೋಟೊಗಳು ತಮ್ಮ ಮಗಳು ಇವಾಂಕಾ ಅವರ ಮನ ಕಲುಕಿವೆ. ಈ ಬಿಕ್ಕಟ್ಟು ಶಮನಕ್ಕೆ ಮಾರ್ಗೋಪಾಯದ ಬಗ್ಗೆ ಚರ್ಚಿಸಬೇಕಿದೆ ಎಂಬುದಾಗಿ ಟ್ರಂಪ್ ವಿವರಿಸಿದ್ದಾರೆ ಎಂದು ಕಾಂಗ್ರೆಸ್‌ನ ಕ್ರಿಸ್ ಕೊಲ್ಲಿನ್ಸ್ ಹೇಳಿದ್ದಾರೆ.
ಆದಾಗ್ಯೂ, ಇವಾಂಕಾ ಅವರು ಈ ಬಗ್ಗೆ ಬಹಿರಂಗವಾಗಿ ಧ್ವನಿಯೆತ್ತಿಲ್ಲವಾದರೂ, ಮಂಗಳವಾರ (ಭಾರತೀಯ ಕಾಲಮಾನದ ಪ್ರಕಾರ ಬುಧವಾರ) ಸಂಜೆ ಇಲ್ಲಿನ ಸಂಸದರೊಂದಿಗೆ ಸಭೆಯಲ್ಲಿ ಈ ಕುರಿತು ಒತ್ತಾಯಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ವಿವಾದಿತ ವಲಸೆ ನೀತಿ ಜಾರಿಗೆ ಮುಂದಾದ ವೇಳೆಯೂ ಟ್ರಂಪ್ ಅವರ ಪತ್ನಿ ಮತ್ತು ಮೆಲಾನಿಯಾ, ವೈದ್ಯರು, ಧಾರ್ಮಿಕ ಮುಖಂಡರು ಸೇರಿದಂತೆ ಇತರ ಗಣ್ಯರು ಟೀಕಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.