2 ನೇ ದಿನಕ್ಕೆ ಕಾಲಿಟ್ಟಿದೆ ಬಿಸಿಯೂಟ ಕಾರ್ಯಕರ್ತೆಯರ ಧರಣಿ; ಸರ್ಕಾರಕ್ಕೆ ಮುಟ್ಟುತ್ತಾ 'ಬಿಸಿ'?

By Suvarna Web DeskFirst Published Feb 7, 2018, 9:18 AM IST
Highlights

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರು ಬೀದಿಗಿಳಿದಿದ್ದಾರೆ.

ಬೆಂಗಳೂರು (ಫೆ.07): ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರು ಬೀದಿಗಿಳಿದಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಬಿಸಿಯೂಟ ಕಾರ್ಯಕರ್ತೆಯರು  ಫ್ರೀಡಂಪಾರ್ಕ್​ ಬಳಿ ಅಹೋರಾತ್ರಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಸಿಎಂ ಸಿದ್ದರಾಮಯ್ಯ ಪ್ರತಿಭಟನಾ ಸ್ಥಳಕ್ಕೆ ಬರಲೇಬೇಕೆಂದು ಪಟ್ಟು ಹಿಡಿದಿದ್ದಾರೆ.

ಸಿಎಂ ಜತೆ ಚರ್ಚಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಶಿಕ್ಷಣ ಸಚಿವ ತನ್ವೀರ್ ಸೇಠ್ ನಿನ್ನೆ ಮಧ್ಯಾಹ್ನ ಭರವಸೆ ಕೊಟ್ಟಿದ್ದರು. ಭರವಸೆ ಕೊಟ್ಟು ಬಂದ ಮೇಲೆ ಸಚಿವರು ಇನ್ನೂ ಪ್ರತಿಭಟನಾ ಸ್ಥಳಕ್ಕೆ ಹೋಗಿಲ್ಲ. ಫ್ರೀಡಂ ಪಾರ್ಕ್​​​​​​ನ ರಸ್ತೆಯಲ್ಲಿ ಊಟ ಹಾಗೂ ಶೌಚಾಲಯವಿಲ್ಲದೆ ಕಾರ್ಯಕರ್ತೆಯರು ಪರದಾಡುತ್ತಿದ್ದಾರೆ.

ಪ್ರತಿಭಟನೆ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು ಬಿಸಿ ಊಟ ತಯಾರಕ ಸಿಬ್ಬಂದಿ ರಸ್ತೆ ತಡೆಗೆ ಮುಂದಾಗಿದ್ದು ಪೊಲೀಸರು ಅವಕಾಶ ನೀಡಿಲ್ಲ.  ರಸ್ತೆ ತಡೆ ನಡೆಸಿದರೆ ಬಂಧಿಸುವ ಎಚ್ಚರಿಕೆ ನೀಡಿದ್ದಾರೆ. ಪೊಲೀಸರೊಂದಿಗೆ ಪ್ರತಿಭಟನಾಕಾರರು  ತೀವ್ರ ವಾಗ್ವಾದಕ್ಕಿಳಿದಿದ್ದಾರೆ.  

click me!