ರಕ್ತವನ್ನೇ ಹೆಪ್ಪುಗಟ್ಟಿಸುವ ಹಿಮಗಡ್ಡೆಗಳ ನಡುವೆ ಸೈನಿಕರ ಯೋಗ!

First Published Jun 21, 2018, 11:12 AM IST
Highlights

ರಕ್ತವನ್ನೇ ಹೆಪ್ಪುಗಟ್ಟಿಸುವ ಹಿಮಗಡ್ಡೆಗಳ ನಡುವೆ ಸೈನಿಕರ ಯೋಗ

ಇಂಡೋ-ಟಿಬೆಟಿಯನ್ ಗಡಿಯಲ್ಲಿ ಸೈನಿಕರಿಂದ ಯೋಗ

ದಿಗರು ನದಿಯಲ್ಲಿ ಐಟಿಬಿಪಿ ಯೋಧರಿಂದ ಯೋಗ

ಲಡಾಖ್(ಜೂ.21): ಭಾರತೀಯ ಸೈನಿಕರ ಸಾಮರ್ಥ್ಯದ ಅನಾವರಣಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ವೇದಿಕೆಯಾಗಿದ್ದು, ಬಿಸಿ ರಕ್ತವನ್ನೇ ಹೆಪ್ಪುಗಟ್ಟಿಸುವ ಹಿಮಗಡ್ಡೆಗಳ ನಡುವೆ ಭಾರತೀಯ ಸೈನಿಕರು ಯೋಗ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

Indo-Tibetan Border Police personnel perform Surya Namaskar in cold desert of Ladakh at an altitude of 18,000 feet pic.twitter.com/ky3PmJUm0G

— ANI (@ANI)

ಸಮುದ್ರ ಮಟ್ಟದಿಂದ ಬರೊಬ್ಬರಿ 18 ಸಾವಿರ ಅಡಿಗಳಷ್ಟು ಮೇಲಿರುವ ಇಂಡೋ-ಟಿಬೆಟಿಯನ್ ಗಡಿಯಲ್ಲಿ ಕರ್ತವ್ಯನಿರತರಾಗಿದ್ದ ಸುಮಾರು 30ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ಯೋಗ ಪ್ರದರ್ಶನ ಮಾಡಿದರು. ಐಟಿಬಿಪಿಯ ಸುಮಾರು 30ಕ್ಕೂ ಹೆಚ್ಚು ಯೋಧರು ಯೋಗ ಮಾಡುವ ವಿಡಿಯೋ ಇದೀಗ ವೈರಲ್ ಅಗಿದೆ.

Arunachal Pradesh: Indo Tibetan Border Police jawans perform 'River Yoga' in Digaru river, in Lohitpur pic.twitter.com/zlhIj2CvtL

— ANI (@ANI)

ಅಂತೆಯೇ ಇತ್ತ ಕೊರೆವ ಚಳಿಯಲ್ಲೇ ಅರುಣಾಲ ಪ್ರದೇಶದ ಲೋಹಿತ್ ಪುರದಲ್ಲಿರುವ ಇಂಡೋ-ಟಿಬೆಟ್ ಗಡಿಯಲ್ಲಿನ ದಿಗರು ನದಿಯಲ್ಲಿ ಐಟಿಬಿಪಿಯ ಸುಮಾರು 20ಕ್ಕೂ ಅಧಿಕ ಯೋಧರು ನದಿ ಯೋಗ ಪ್ರದರ್ಶನ ಮಾಡಿದರು. ಅತ್ಯಂತ ಚಳಿಯ ನಡುವೆಯೇ ಸೈನಿಕರು ಮಾಡಿದ ಯೋಗ ವಿಶೇಷವಾಗಿತ್ತು.

click me!