ಸಬ್ಸಿಡಿ ದುರುಪಯೋಗ ಪತ್ತೆಗೆ ಮುಂದಾದ ಐಟಿ ಇಲಾಖೆ: 10 ಲಕ್ಷಕ್ಕಿಂತ ಹೆಚ್ಚಿನ ಆದಾಯ ವರ್ಗಕ್ಕೆ ಸಬ್ಸಿಡಿ ಇಲ್ಲ?

Published : Dec 20, 2016, 06:28 AM ISTUpdated : Apr 11, 2018, 12:57 PM IST
ಸಬ್ಸಿಡಿ ದುರುಪಯೋಗ ಪತ್ತೆಗೆ ಮುಂದಾದ ಐಟಿ ಇಲಾಖೆ: 10 ಲಕ್ಷಕ್ಕಿಂತ ಹೆಚ್ಚಿನ ಆದಾಯ ವರ್ಗಕ್ಕೆ ಸಬ್ಸಿಡಿ ಇಲ್ಲ?

ಸಾರಾಂಶ

ವಾರ್ಷಿಕ 10 ಲಕ್ಷ ರೂ.ಗಿಂತ ಹೆಚ್ಚಿನ ವರಮಾನ ಹೊಂದಿರುವ ತೆರಿಗೆದಾರರಿಗೆ ಹೊಸದೊಂದು ಶಾಕ್​ ಕಾದಿದೆ. 10 ಲಕ್ಷಕ್ಕಿಂದ ಹೆಚ್ಚಿನ ಆದಾಯ ಹೊಂದಿರುವವರನ್ನು ಎಲ್‌ಪಿಜಿ ಸಬ್ಸಿಡಿ ಸೌಲಭ್ಯದಿಂದ ಹೊರಗಿಡಲು ಸರ್ಕಾರ ಮುಂದಾಗಿದೆ.

ನವದೆಹಲಿ(ಡಿ.20): ವಾರ್ಷಿಕ 10 ಲಕ್ಷ ರೂ.ಗಿಂತ ಹೆಚ್ಚಿನ ವರಮಾನ ಹೊಂದಿರುವ ತೆರಿಗೆದಾರರಿಗೆ ಹೊಸದೊಂದು ಶಾಕ್​ ಕಾದಿದೆ. 10 ಲಕ್ಷಕ್ಕಿಂದ ಹೆಚ್ಚಿನ ಆದಾಯ ಹೊಂದಿರುವವರನ್ನು ಎಲ್‌ಪಿಜಿ ಸಬ್ಸಿಡಿ ಸೌಲಭ್ಯದಿಂದ ಹೊರಗಿಡಲು ಸರ್ಕಾರ ಮುಂದಾಗಿದೆ.

ಎಲ್‌'ಪಿಜಿ ಅಡುಗೆ ಅನಿಲಕ್ಕೆ ಕೇಂದ್ರ ಸರಕಾರ ನೀಡುತ್ತಿರುವ ಸಬ್ಸಿಡಿ ದುರುಪಯೋಗವನ್ನು ಪತ್ತೆ ಹಚ್ಚುವ  ಉದ್ದೇಶದಿಂದ, ಇವೆರಡು ಇಲಾಖೆಗಳು ತೆರಿಗೆದಾರರ ಆದಾಯ ಪರಿಶೀಲನೆಗೆ ಮುಂದಾಗುತ್ತಿವೆ. ವಾರ್ಷಿಕ 10 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವ ವೈಯಕ್ತಿಕ ತೆರಿಗೆದಾರರ ವಿವರವನ್ನು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಜತೆ ಅತಿ ಶೀಘ್ರವೇ ವಿನಿಮಯ ಮಾಡಿಕೊಳ್ಳಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

ಐಟಿ ಇಲಾಖೆ ವೈಯಕ್ತಿಕ ತೆರಿಗೆದಾರರ ಕರ ಮಾಹಿತಿಯ ಜತೆಗೆ, ಆತನ ಪ್ಯಾನ್‌ ಸಂಖ್ಯೆ, ಜನ್ಮ ದಿನಾಂಕ, ಲಭ್ಯವಿರುವ ಎಲ್ಲಾ ವಿಳಾಸ, ಇ-ಮೇಲ್‌ ಐಡಿ, ಮೊಬೈಲ್‌ ಸಂಖ್ಯೆ ಸೇರಿದಂತೆ ಸಮಗ್ರ ಮಾಹಿತಿಯನ್ನು ಪೆಟ್ರೋಲಿಯಂ ಸಚಿವಾಲಯಕ್ಕೆ ಒದಗಿಸಲಿದೆ. ತೆರಿಗೆದಾರನ ಮಾಹಿತಿ ವಿನಿಮಿಯವನ್ನು ಗೌಪ್ಯ ಮತ್ತು ಸುರಕ್ಷಿತವಾಗಿರಿಸುವ ಸಲುವಾಗಿ ಐಟಿ ಇಲಾಖೆ ಶೀಘ್ರವೇ ಪೆಟ್ರೋಲಿಯಂ ಸಚಿವಾಲಯದ ಜತೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಿದೆ.

ಐಟಿ ಇಲಾಖೆಯಿಂದ ಮಾಹಿತಿ ವಿನಿಮಯ ಮಾಡಿಕೊಂಡ ನಂತರ ವಾರ್ಷಿಕ 10 ಲಕ್ಷ ರೂ.ಗಿಂತ ಹೆಚ್ಚಿನ ವರಮಾನವಿರುವ ತೆರಿಗೆದಾರರನ್ನು ಎಲ್‌ಪಿಜಿ ಸಬ್ಸಿಡಿ ಸೌಲಭ್ಯದಿಂದ ನಿರ್ಬಂಧಿಸುವುದು ಸರಕಾರದ ಉದ್ದೇಶವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ಕಾಯ್ದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅತಿದೊಡ್ಡ ಬೆದರಿಕೆ: ಪಿ.ರಾಜೀವ್ ಲೇಖನ
ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ತಡೆಯಲು ದ್ವೇಷ ಭಾಷಣ ಕಾಯ್ದೆ ಅಗತ್ಯ: ರಮೇಶ್ ಬಾಬು ಲೇಖನ