
ಬೆಂಗಳೂರು (ಫೆ.12): ಎಂಟಿಬಿ ನಾಗರಾಜ್ ಸಿಎಂ ಸಿದ್ದರಾಮಯ್ಯರ ಆಪ್ತ ಶಾಸಕರಲ್ಲಿ ಇವರೂ ಕೂಡ ಒಬ್ಬರು. 2 ದಿನಗಳ ಹಿಂದೆ ಇವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಸೂರ್ಯ ಹುಟ್ಟಿ, ಮುಳುಗುವವರೆಗೂ ಐಟಿ ಅಧಿಕಾರಿಗಳು ಮನೆಯ ಮೂಲೆ ಮೂಲೆಯಲ್ಲಿ ಶೋಧಿಸಿದ್ದರು. ಅವತ್ತು ಎಂಟಿಬಿ ನಾಗರಾಜನ ಮನೆಯಲ್ಲಿ ಸಿಕ್ಕ ಅಕ್ರಮ ಆಸ್ತಿ ಎಷ್ಟು ಗೊತ್ತಾ? ಇಲ್ಲಿದೆ ವಿವರಗಳು.
ಸಿಎಂ ಆಪ್ತ ಶಾಸಕನ ಅಕ್ರಮ ಆಸ್ತಿ ವಿವರ ಬಿಚ್ಚಿಟ್ಟ ಐಟಿ.
ಮನೆಯಲ್ಲಿ ಸಿಕ್ಕಿದ್ದು ನೂರಾರು ಕೋಟಿ ಆಸ್ತಿ ಮೌಲ್ಯ
ನಾಗರಾಜ್ ಮನೆಯಲ್ಲಿ ಒಟ್ಟು 120 ಕೋಟಿ ಅಕ್ರಮ ಆಸ್ತಿ ಪತ್ತೆ
1.10 ಕೋಟಿ ನಗದು, 10 ಕೆಜಿ ಚಿನ್ನ, 560 ಎಕರೆ ಭೂ ದಾಖಲಾತಿ
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ 75 ಕೋಟಿ ಹಣ ಸ್ವೀಕಾರ
ಮನೆ, ವಾಣಿಜ್ಯ ಕಟ್ಟಡಗಳ 3,500 ಅಕ್ರಮ ಆಸ್ತಿಪಾಸ್ತಿ ಪತ್ರ ಪತ್ತೆ
ಸಿಎಂ ಆಪ್ತ ಶಾಸಕರೇ ಐಟಿ ಟಾರ್ಗೆಟ್!?
ಇದುವರೆಗೆ ಐಟಿ ದಾಳಿ ನಡೆದಿರುವುದೆಲ್ಲ ಸಿಎಂ ಆಪ್ತರ ಮನೆ ಮೇಲೆಯೇ. ಕೆಲ ದಿನಗಳ ಹಿಂದೆ ಸಿಎಂ ಸಂಪುಟ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಅಲ್ಲಿಯೂ ಕೋಟಿ ಕೋಟಿ ಅಕ್ರಮ ಆಸ್ತಿ ಬಯಲಾಗಿತ್ತು. ಇವತ್ತು ಐಟಿ ನೀಡಿರುವ ಹೊಸಕೋಟೆ ಶಾಸಕನ ಅಕ್ರಮ ಆಸ್ತಿ ವಿವರವನ್ನ ಐಟಿ ಅಧಿಕಾರಿಗಳು ಲೀಕ್ ಮಾಡಿದ್ದಾರೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.