
ಬೆಂಗಳೂರು(ಆ.02): ರಾಜ್ಯದ ಪ್ರಭಾವಿ ರಾಜಕಾರಣಿ ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯಿಂದ ಅನೇಕ ಮಹತ್ವದ ಅಂಶಗಳು ಬಯಲಾಗಿದೆ.
ರಾಜ್ಯದ ಸಿರಿವಂತ ರಾಜಕಾರಣಿ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಇಂದು ಬೆಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳೀ ಮಾಡಿದ್ದು , ದಾಳಿ ವೇಳೆ ಐಟಿ ಅಧಿಕಾರಿಗಳು ಡಿಕೆ ಶಿವಕುಮಾರಗೆ ಬೆವರಿಳಿಸಿದ್ದಾರೆ. ಐಟಿ ಅಧಿಕಾರಿಗಳ ಪ್ರಶ್ನೆಗಳ ಸುರಿಮಳೆಗೆರದಿದ್ದು. ಅನೇಕ ರೋಚಕ ಸತ್ಯಗಳು ದಾಳಿ ವೇಳೆ ಬಯಲಾಗಿದೆ.
2008ರ ಚುನಾವಣೆಯಲ್ಲಿ ಡಿಕೆ ಶಿವಕುಮರ್ ಒಟ್ಟಾರೆ ಆಸ್ತಿ 75 ಕೋಟಿಯಷ್ಟಿದ್ದು, 2013ರ ವೇಳೆಗೆ 251 ಕೋಟಿ ರೂಪಾಯಿಗಳ ಗಡಿ ದಾಟಿದೆ. ಕೇವಲ 5ವರ್ಷಗಳಲ್ಲಿ ಡಿಕೆಶಿ 174 ಕೋಟಿಯ ಒಡೆಯ. ಇನ್ನು 2016ರಲ್ಲಿ ಡಿಕೆ ಶಿವಕುಮಾರ್ 496 ಕೋಟಿ ರೂಪಾಯಿ ಆಸ್ತಿಯನ್ನ ಘೋಷಣೆ ಮಾಡಿಕೊಂಡಿದ್ದು, ಒಟ್ಟಾರೆ 2008ರಿಂದ 2016ರ ವರೆಗೆ ಅಂದ್ರೆ 10 ವರ್ಷಗಳಲ್ಲಿ ಡಿಕೆ ಶಿವಕುಮಾರ್ ಆಸ್ತಿಯಲ್ಲಿ 496 ಕೋಟಿಯಷ್ಟು ಹೆಚ್ಚಳವಾಗಿದೆ.
ಇನ್ನು ಒಬ್ಬ ರಾಜಕಾರಣಿ ಕೇವಲ 10 ವರ್ಷದಲ್ಲಿ ನೂರಾರು ಕೋಟಿಯಷ್ಟು ಆಸ್ತಿಯನ್ನ ಹೆಚ್ಚಳ ಮಾಡಿರುವುದು ಎಲ್ಲರ ಆಶ್ವರ್ಯಕ್ಕೆ ಕಾರಣವಾಗಿದ್ದು. ಇಷ್ಟು ಆಸ್ತಿ ಗಳಿಕೆ ಹೇಗೆ ಏನು ಎಂಬ ಅನೇಕ ಪ್ರಶ್ನೆಗಳನ್ನು ಐಟಿ ಅಧಿಕಾರಿಗಳು ಕೇಳಿದ್ದು. ಅಧಿಕಾರಿಗಳ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಕಕ್ಕಾಬಿಕ್ಕಿಯಾಗಿದ್ದಾರೆ. ಒಟ್ಟಾರೆ ಡಿಕೆ ಶಿವಕುಮಾರ್ ನಿವಾಸದ ಮೇಲೆ ನಡೆದಿರುವ ಐಟಿ ದಾಳಿಯನ್ನು ರಾಜಕೀಯ ಪ್ರೇರಿತ ದಾಳಿ ಎಂದು ಬಿಂಬಿತವಾಗ್ತಾ ಇದ್ದು, ಇನ್ನಷ್ಟೇ ಒಟ್ಟಾರೆ ಡಿಕೆ ಶಿವಕುಮಾರ್ ಆಸ್ತಿಯ ಮೌಲ್ಯ ಎಷ್ಟು ಎಂದು ಬಯಲಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.