ರಾಜ್ಯ ಚುನಾವಣೆ: ಹಣಕಾಸು ವ್ಯವಹಾರಗಳ ಮೇಲೆ ಕಣ್ಣಿಟ್ಟಿದೆ ಐಟಿ; ಚುನಾವಣಾ ಅಕ್ರಮ ಕಂಡು ಬಂದರೆ ಕರೆ ಮಾಡಿ

By Suvarna Web DeskFirst Published Apr 3, 2018, 6:43 PM IST
Highlights

ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ  ರಾಜ್ಯ ಚುನಾವಣೆ ಮೇಲೆ  ಐಟಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.  ಚುನಾವಣೆಯ ಹಣಕಾಸು ವಹಿವಾಟಿನ ಮೇಲೆ ಐಟಿ ಅಧಿಕಾರಿಗಳಿಂದ ತೀವ್ರ ನಿಗಾ ವಹಿಸಿದ್ದಾರೆ. 

ಬೆಂಗಳೂರು (ಏ. 03): ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ  ರಾಜ್ಯ ಚುನಾವಣೆ ಮೇಲೆ  ಐಟಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.  ಚುನಾವಣೆಯ ಹಣಕಾಸು ವಹಿವಾಟಿನ ಮೇಲೆ ಐಟಿ ಅಧಿಕಾರಿಗಳಿಂದ ತೀವ್ರ ನಿಗಾ ವಹಿಸಿದ್ದಾರೆ. 

ಕ್ವೀನ್ಸ್ ರಸ್ತೆಯ ಐಟಿ ಇಲಾಖೆಯ ಕಛೇರಿಯಲ್ಲಿ  24 ಗಂಟೆ  ಕಂಟ್ರೋಲ್ ರೂಂ ತೆರೆದಿರುತ್ತದೆ.  ಚುನಾವಣೆಯಲ್ಲಿ ಆಕ್ರಮ ಹಣಕಾಸು ಹಂಚಿಕೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಮತ್ತು ತುರ್ತು ಕಾರ್ಯಚರಣೆಗೆ 24 ಗಂಟೆ ಕಂಟ್ರೋಲ್ ರೂಂ ತರೆದಿದ್ದಾರೆ ಐಟಿ ಅಧಿಕಾರಿಗಳು.  ಚುನಾವಣಾ ಆಯೋಗದ ಸೂಚನೆ ಮೇರೆಗೆ ಐಟಿ ಅಧಿಕಾರಿಗಳು  ಕಟ್ಟುನಿಟ್ಟಿನ  ಕ್ರಮಕ್ಕೆ ಮುಂದಾಗಿದ್ದಾರೆ. 

ಚುನಾವಣೆಯ ಆಕ್ರಮಗಳ ಪರೀವೀಕ್ಷಣೆ  ಮತ್ತು ಹಣಕಾಸು ನಿಯಂತ್ರಣಕ್ಕೆ ಐಟಿ ಇಲಾಖೆ ಮುಂದಾಗಿದೆ. 

ಟೋಲ್ ಫ್ರೀ ಸಂಖ್ಯೆ 18004252115 ಪೋನ್ : 080 22861126  ಮೊಬೈಲ್ : 8277413614 /8277422825  ಈ ನಂಬರ್ ಗೆ ಕರೆ ಮಾಡಿ ಚುನಾವಣಾ ಆಕ್ರಮಗಳ ಬಗ್ಗೆ ದೂರು ನೀಡುವಂತೆ ಐಟಿ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ. 

click me!